ಶಿಮ್ಲಾ: ವಿವಾದಿತ ಸಂಜೌಲಿ ಮಸೀದಿಯ ಮೂರು “ಅನಧಿಕೃತ” ಮಹಡಿಗಳನ್ನು ಕೆಡವಲು ಶಿಮ್ಲಾ ಮುನ್ಸಿಪಲ್ ಕಮಿಷನರ್ ನ್ಯಾಯಾಲಯವು ಶನಿವಾರ ಆದೇಶ ನೀಡಿದೆ. ಆದೇಶಗಳನ್ನು ಕಾರ್ಯಗತಗೊಳಿಸಲು ವಕ್ಫ್ ಮಂಡಳಿ ಮತ್ತು ಮಸೀದಿ ಸಮಿತಿಗೆ ಎರಡು ತಿಂಗಳ ಕಾಲಾವಕಾಶವನ್ನು ನೀಡಿದೆ.
ಇದನ್ನೂ ಓದಿ: J-K elections: ಬಿಜೆಪಿ ಜೊತೆ ಮೈತ್ರಿ ಇಲ್ಲ; ಫಾರೂಕ್ ಅಬ್ದುಲ್ಲಾ ಘೋಷಣೆ
ಮುಸ್ಲಿಂ ಹಿತರಕ್ಷಣಾ ಸಮಿತಿ ಪ್ರಾತಿನಿಧ್ಯದಲ್ಲಿ ಅನಧಿಕೃತ ಮಹಡಿಗಳನ್ನು ಕಡೆವಲು ಮುಂದಾಗಿತ್ತು. ಈಗ ವಕ್ಫ್ ಬೋರ್ಡ್ ವೆಚ್ಚದಲ್ಲಿ ನೆಲಸಮ ಮಾಡಬೇಕು ಎಂದು ಶಿಮ್ಲಾ ಮುನ್ಸಿಪಲ್ ಆಯುಕ್ತರ ಕಚೇರಿ ತಿಳಿಸಿದೆ. ಮಸೀದಿಯ ಮೂರು ಮಹಡಿಗಳನ್ನು ಕೆಡವಲು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಎಂದು ಸಂಜೌಲಿ ಮಸೀದಿ ಸಮಿತಿ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.
ವಕ್ಫ್ ಮಂಡಳಿಯ ವಕೀಲ ಬಿಎಸ್ ಠಾಕೂರ್, ಕಮೀಷನರ್ ಕಚೇರಿಯು ಎರಡು ಉಳಿದ ಮಹಡಿಗಳ (ನೆಲ ಮತ್ತು ಮೊದಲ ಮಹಡಿ) ಕುರಿತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 21ರಂದು ನಡೆಲಿದೆ ಎಂದು ಹೇಳಿದ್ದಾರೆ.
ಮಸೀದಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಸೆಪ್ಟೆಂಬರ್ 11 ರಂದು ಪ್ರತಿಭಟನೆಯಲ್ಲಿ 10 ಜನರು ಗಾಯಗೊಂಡಿದ್ದರು.
J&K | ಮತ ಎಣಿಕೆಗೂ ಮೊದಲೇ ಜಮ್ಮು ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ!