ಏಳು ವರ್ಷದ ಮಗ ವಿಯಾನ್​ಗೆ ಕೃತಜ್ಞತೆ ಸಲ್ಲಿಸಿದ ನಟಿ ಶಿಲ್ಪಾ ಶೆಟ್ಟಿ ಭಾವುಕ ಸಾಲುಗಳು ಹೀಗಿವೆ…

ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮುದ್ದಿನ ಮಗ ವಿಯಾನ್​ಗೆ ಇಂದು ಏಳನೇ ವರ್ಷದ ಜನ್ಮದಿನದ ಸಂಭ್ರಮ. ತಮ್ಮ ಮಗನ ಹುಟ್ಟುಹಬ್ಬಕ್ಕೆ ಶಿಲ್ಪಾಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಮಗನ ಭಾವಚಿತ್ರಗಳ ವಿಡಿಯೋವನ್ನು ಶೇರ್​ ಮಾಡಿ ಭಾವನಾತ್ಮಕವಾದ ಸಾಲುಗಳನ್ನು ಬರೆದಿದ್ದಾರೆ.

ನಾನು ನಿನಗೆ ಜನ್ಮ ನೀಡುವವರೆಗೂ ಈ ಪವಾಡಗಳಲ್ಲೆಲ್ಲ ನನಗೆ ನಂಬಿಕೆಯೇ ಇರಲಿಲ್ಲ. ನಿನೀಗ ಏಳನೇ ವರ್ಷಕ್ಕೆ ಕಾಲಿಟ್ಟಿದ್ದೀಯ. ಅದೆಷ್ಟು ಬೇಗ ಸಮಯ ಕಳೆಯುತ್ತದೆ ಎಂಬ ಬಗ್ಗೆ ಅಚ್ಚರಿಯುಂಟಾಗುತ್ತಿದೆ. ನಿರೀಕ್ಷೆ, ನಿರ್ಬಂಧಗಳೇ ಇಲ್ಲದೆ ಪ್ರೀತಿಯಲ್ಲಿ ನನಗೆ ನಂಬಿಕೆ ಹುಟ್ಟಿಸಿದ್ದು ನೀನು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಮತ್ತು ಪ್ರತಿದಿನ ಒಂದಲ್ಲ ಒಂದು ವಿಚಾರವನ್ನು ನನಗೆ ಕಲಿಸುತ್ತಿರುವುದಕ್ಕೆ ನಿನಗೆ ಕೃತಜ್ಞತೆ ಹೇಳುತ್ತೇನೆ. ನೀನು ನಮ್ಮ ಪಾಲಿನ ಜಗತ್ತು. ನಿನ್ನ ತಂದೆ ಹಾಗೂ ತಾಯಿಯರಾದ ನಾವು ಸದಾ ನಿನ್ನನ್ನು ಹುರಿದುಂಬಿಸುತ್ತೇವೆ ಎಂದು ಬರೆದಿರುವ ಸಾಲುಗಳು ಮನಮುಟ್ಟುವಂತಿದೆ.

ನಟಿಯರಾದ ಬಿಪಾಶಾ ಬಸು, ದಿಯಾ ಮಿರ್ಜಾ, ಸಮೀರಾ ರೆಡ್ಡಿ ಮತ್ತಿತರರು ವಿಯಾನ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *