ಏನು ಶಿಲ್ಪಾ ಶೆಟ್ಟಿಯವರೇ ಪ್ಯಾಂಟ್​ ಮರೆತುಹೋಯ್ತಾ?

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವುದು ಒಂದು ಫ್ಯಾಷನ್​ ಆಗಿದೆ. ಈಗ ಹಾಗೆ ಟ್ರೋಲ್​ಗೆ ಒಳಗಾದವರು ಬಾಲಿವುಡ್​ ಬೆಡಗಿ, ಬ್ಯೂಟಿಫುಲ್​ ಮಮ್ಮಿ ಶಿಲ್ಪಾ ಶೆಟ್ಟಿ.

ಅವರದ್ದೊಂದು ಹಳೇ ಫೋಟೋ ಸಖತ್ ಟ್ರೋಲ್​ ಗೆ ಒಳಗಾಗುತ್ತಿದೆ. ಕಪ್ಪು ಬಣ್ಣದ ಟಾಪ್​ ತೊಟ್ಟು, ಪ್ಯಾಂಟ್​ ಹಾಕಿಕೊಳ್ಳದೆ, ಪುಟ್ಟ ಮಗನ ಕೈ ಹಿಡಿದು ಬೇಗಬೇಗ ಹೆಜ್ಜೆ ಹಾಕುತ್ತಿರುವ ಹಳೇ ಫೋಟೋವೊಂದು ಈಗ ನೆಟ್ಟಿಗರ ಕೈಗೆ ಸಿಕ್ಕಿದ್ದು ಭರ್ಜರಿ ಕಾಮೆಂಟ್​ಗಳು ಬರುತ್ತಿವೆ. ತುಂಬ ಜನ ಶಿಲ್ಪಾ ಶೆಟ್ಟಿ ಧರಿಸಿದ ಡ್ರೆಸ್​ನ್ನು ಇಷ್ಟಪಡಲಿಲ್ಲ. ಶಿಲ್ಪಾ ಅವರು ಪ್ಯಾಂಟ್​ ಧರಿಸುವುದನ್ನೇ ಮರೆತುಬಿಟ್ಟಿದ್ದಾರೆ ಎಂದಿದ್ದಲ್ಲದೆ, ಕೆಲವರಂತೂ ಮಗನೊಂದಿಗೆ ಹೊರಟಾಗ ಹೇಗೆ ಉಡುಪು ಧರಿಸಬೇಕು ಎಂಬುದನ್ನೂ ಸಲಹೆ ನೀಡಿದ್ದಾರೆ.

ಆದರೆ, ಈ ಫೋಟೋವನ್ನು 2017 ರ ಸೆಪ್ಟೆಂಬರ್ 7ರಂದೇ ಕ್ಲಿಕ್ಕಿಸಲಾಗಿದ್ದು ಈಗ ಸಖತ್​ ಸದ್ದು ಪಾಡುತ್ತಿದೆ. ಶಿಲ್ಪಾಶೆಟ್ಟಿ ನಟನೆ, ಸೌಂದರ್ಯದಿಂದ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಯೋಗ, ಬರಹ, ನೃತ್ಯ ಕೌಶಲದಿಂದ ಅಭಿಮಾನಿಗಳ ಮನಸಲ್ಲಿ ಸ್ಥಾನ ಪಡೆದವರು.