ಹೊಸಕೋಟೆ: ಸಮಾಜದಲ್ಲಿ ಉತ್ತಮ ಪರಿವರ್ತನೆಗಳಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಉಪ್ಪಾರಹಳ್ಳಿಯಲ್ಲಿರುವ ಶ್ರೀ ಕರಗದಮ್ಮ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ಶಿಕ್ಷಣ ೌಂಡೇಷನ್‌ನಿಂದ ತಾಲೂಕಿನ ಸುಮಾರು 19 ಶಾಲೆಯ ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಕ್ಷಣ ಯಾರಿಂದಲೂ ಕದಿಯಲಾಗದ ಸಂಪತ್ತಾಗಿದ್ದು, ಕಲಿಕಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಂದಿನ ಗುರಿ ಹೊಂದಿ ಗುರುವಿನ ಮಾರ್ಗದರ್ಶನದಲ್ಲಿ ಮುನ್ನೆಡೆಯಬೇಕು ಎಂದು ತಿಳಿಹೇಳಿದರು.
ವಿದ್ಯಾರ್ಥಿಗಳು ಸಣ್ಣಪುಟ್ಟ ನ್ಯೂನತೆ ಸರಿಪಡಿಸಿಕೊಂಡು ಉತ್ತಮ ಅಂಕಗಳಿಸಿ ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಬೇಕಿದೆ ಎಂದರು.
ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣ ಮೂರ್ತಿ ಮಾತನಾಡಿ, ಶಾಸಕರು ಸ್ವಂತ ಇಚ್ಛಾಶಕ್ತಿಯಿಂದ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಈ ಕಾರ್ಯಕ್ರಮವನ್ನು ಶಿಕ್ಷಣ ೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉತ್ತಮ ಕೀರ್ತಿ ಹೊಂದಬೇಕು. ಇದರಿಂದ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೂ ಶಿಕ್ಷಣ ತಜ್ಞರಿಂದ ಪರೀಕ್ಷಾ ಸಿದ್ಧತೆ ಅಭ್ಯಾಸದ ಅವಧಿ ಹಾಗೂ ಮಾದರಿಗಳು ಹಾಗೂ ಮುಂದಿನ ಪರೀಕ್ಷೆಯಲ್ಲಿರುವ ಬದಲಾವಣೆ ಸಂಬಂಧ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಲಲಿತಮ್ಮ, ವಕೀಲ ಸತೀಶ್, ಶಿಕ್ಷಣ ೌಂಡೇಷನ್ ಮುಖ್ಯಸ್ಥ ಲೆಫ್ಟಿನಲ್ ಕಮಾಂಡರ್ ಸುನೀಲ್, ಶಿಕ್ಷಣ ತಜ್ಞೆ ಜಿದ್ ಕಲಾ, ಶಿಕ್ಷಣ ಸಂಯೋಜಕರಾದ ವೀರೇಶ್, ಶಿವಸ್ವಾಮಿ, ಆಲಪನಹಳ್ಳಿ ಕ್ಲಸ್ಟರ್ ಸಿಆರ್‌ಪಿಡಿ ಎಸ್.ಲೋಕೇಶ್ ಮತ್ತಿತರರಿದ್ದರು.
2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ಶೇ.70ರಷ್ಟು ಮಾತ್ರ ಇದ್ದು, 2018-19ನೇ ಸಾಲಿನಲ್ಲಿ ಶೇ.90ರಷ್ಟು ವೃದ್ಧಿಸುವಲ್ಲಿ ಶಿಕ್ಷಕರು ಹೆಚ್ಚಿನ ಶ್ರಮವಹಿಸಿದ್ದಾರೆ. ಆದರೆ 2019-20ನೇ ಸಾಲಿನಲ್ಲಿ ಮಿಷನ್ 100 ಹಾಗೂ ಮಿಷನ್ 625 ತಲುಪಬೇಕಿದ್ದು, ಶಿಕ್ಷಕರ ಸಹಕಾರ ಪಡೆದು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಬೇಕಿದೆ.
ಎಸ್.ಎನ್.ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ