23.2 C
Bangalore
Saturday, December 14, 2019

ವಿಶ್ವಕಪ್​ನಿಂದ ಧವನ್ ಔಟ್, ರಿಷಭ್ ಪಂತ್ ಸೇರ್ಪಡೆ: ಎಡಗೈ ಆರಂಭಿಕನ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಬೇಕಿದೆ ಹೆಚ್ಚಿನ ವಿಶ್ರಾಂತಿ

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ಸೌಥಾಂಪ್ಟನ್: ಟೀಮ್ ಇಂಡಿಯಾದ ಈವರೆಗಿನ ಯಶಸ್ವಿ ವಿಶ್ವಕಪ್ ಅಭಿಯಾನಕ್ಕೆ ದೊಡ್ಡ ಏಟು ಬಿದ್ದಿದ್ದು, ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಎಡಗೈ ಆರಂಭಿಕ ಶಿಖರ್ ಧವನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಪ್ಯಾಟ್ ಕಮ್ಮಿನ್ಸ್​ರ ಎಸೆತ ಧವನ್​ರ ಎಡಗೈ ಹೆಬ್ಬೆರಳಿಗೆ ಬಡಿದಿತ್ತು. ಹೆಬ್ಬೆರಳಿನ ಮೂಳೆ ಮುರಿತವಾಗಿರುವುದರಿಂದ ಅವರ ಚೇತರಿಕೆಗೆ ಇನ್ನಷ್ಟು ದಿನಗಳು ಬೇಕಾಗಿರುವ ಕಾರಣ ವಿಶ್ವಕಪ್​ನಿಂದ ಅವರು ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.

ಧವನ್ ಸ್ಥಾನಕ್ಕೆ ಯುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಪಂತ್ ಈಗಾಗಲೇ ಇಂಗ್ಲೆಂಡ್​ನಲ್ಲಿ ಭಾರತ ತಂಡದೊಂದಿಗಿದ್ದು, ಐಸಿಸಿಯ ತಾಂತ್ರಿಕ ಸಮಿತಿಯ ಒಪ್ಪಿಗೆಯೊಂದಿಗೆ ಈಗ ಟೀಮ್ ಡ್ರೆಸಿಂಗ್ ರೂಮ್ ಭಾಗವಾಗಿ ಇರಲಿದ್ದಾರೆ.

ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ 33 ವರ್ಷದ ಧವನ್ ಗಾಯಗೊಂಡಿದ್ದರು. ಅದರ ನಡುವೆಯೂ ಆಡಿದ್ದ ಧವನ್, ಶತಕ ಬಾರಿಸಿ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು. ಈ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಿಗೆ ಧವನ್ ಲಭ್ಯರಿಲ್ಲ ಎಂದು ಟೀಮ್ ಮ್ಯಾನೇಜ್​ವೆುಂಟ್ ತಿಳಿಸಿತ್ತು.

‘ಶಿಖರ್ ಧವನ್​ರ ಎಡಗೈ ಹೆಬ್ಬೆರಳಿನ ಮೂಳೆ ಮುರಿತ ಕಂಡಿದೆ. ಜುಲೈ ಮಧ್ಯದವರೆಗೂ ಅವರು ತಮ್ಮ ಬೆರಳಿಗೆ ಪ್ಲಾಸ್ಟರ್ ಹಾಕಿ ಕೊಂಡಿರಲಿದ್ದಾರೆ. ಆ ಕಾರಣಕ್ಕಾಗಿ ಅವರು ವಿಶ್ವಕಪ್​ನ ಉಳಿದ ಪಂದ್ಯಗಳಿಗೆ ಲಭ್ಯರಿಲ್ಲ’ ಎಂದು ಟೀಮ್ ಇಂಡಿಯಾದ ಮ್ಯಾನೇಜರ್ ಸುನೀಲ್ ಸುಬ್ರಮಣ್ಯಂ ತಿಳಿಸಿದರು. ಅದಕ್ಕಾಗಿ ರಿಷಭ್ ಪಂತ್​ರನ್ನು ಬದಲಿ ಆಟಗಾರರನ್ನಾಗಿ ಸೇರಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ಐಸಿಸಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

ರಿಷಭ್ ಪಂತ್ ಈವರೆಗೂ ಐದು ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದರೂ, ನಿರ್ಭೀತಿಯ ಬ್ಯಾಟಿಂಗ್ ಮೂಲಕ ತಂಡಕ್ಕೆ ಟ್ರಂಪ್​ಕಾರ್ಡ್ ಎನಿಸಿಕೊಳ್ಳುವ ಕಾರಣ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಶ್ವಕಪ್​ಗೆ ಪ್ರಕಟಿಸಿದ್ದ ಅಧಿಕೃತ ಮೀಸಲು ಆಟಗಾರರ ತಂಡದಲ್ಲಿ ಅಂಬಟಿ ರಾಯುಡುರೊಂದಿಗೆ ಪಂತ್ ಕೂಡ ಸ್ಥಾನ ಪಡೆದಿದ್ದರು. ಬರ್ವಿುಂಗ್​ಹ್ಯಾಂನಲ್ಲಿ ಜೂನ್ 30 ರಂದು ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಫಿಟ್ ಆಗುವ ಗುರಿಯಲ್ಲಿದ್ದ ಧವನ್​ಗೆ ಈ ಅವಧಿಯ ವೇಳೆಗೆ ಫಿಟ್ ಆಗುವ ಯಾವುದೇ ಅವಕಾಶವಿಲ್ಲ ಎಂದು ವೈದ್ಯರು ತಿಳಿಸಿದ್ದರು. ‘ಧವನ್ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಫಿಟ್ ಆಗುವುದು ಸಾಧ್ಯವೇ ಇರಲಿಲ್ಲ. ಆದರೆ, ಟೀಮ್ ಮ್ಯಾನೇಜ್​ವೆುಂಟ್ ಅವರ ಗಾಯದ ಗಂಭೀರತೆಯನ್ನು ಅರಿತ ಬಳಿಕ ಬದಲಿ ಆಟಗಾರರನ್ನು ಪ್ರಕಟಿಸುವ ನಿರ್ಧಾರ ಮಾಡಿತ್ತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂತ್​ಗೆ ದೊಡ್ಡ ಅವಕಾಶ

21 ವರ್ಷದ ರಿಷಭ್ ಪಂತ್​ರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿದ್ದ ಪಂತ್, ಐಪಿಎಲ್​ನಲ್ಲೂ 488 ರನ್ ಬಾರಿಸಿದ್ದರು. ಇಂಥ ಆಟಗಾರ ವಿಶ್ವಕಪ್ ತಂಡದಲ್ಲಿ ಇರಬೇಕಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಅದಕ್ಕೆ ತಕ್ಕಂತೆ ಈಗ ಅವರಿಗೆ ಅಂತಾರಾಷ್ಟ್ರೀಯ ಕಣದಲ್ಲಿ ಮಿಂಚಲು ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...