ಶಿಕಾರಿಪುರ: ಪ್ರಸ್ತುತ ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಕಾಮಗಾರಿಗಳಿಗೆ ಸರಿಯಾದ ಸಮಯಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಗುತ್ತಿಗೆದಾರರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಸಂಕಷ್ಟದ ಕಾಲದಲ್ಲಿ ಅವರ ನೆರವಿಗೆ ನಿಲ್ಲಬೇಕು. ಮಾದರಿ ಶಿಕಾರಿಪುರ ತಾಲೂಕು ನಿರ್ಮಿಸುವ ಮಾಜಿ ಸಿಎಂ ಯಡಿಯೂರಪ್ಪ ಅವರ ಕನಸಿಗೆ ಸಹಕಾರ ನೀಡಿದ್ದು ತಾಲೂಕಿನ ಗುತ್ತಿಗೆದಾರರು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ನಿವೃತ್ತ ಕಾರ್ಯಪಾಲಕ ಅಭಿಯಂತ ಎಸ್.ರಮೇಶ್, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಎಲ್.ನಿಂಗಪ್ಪ, ಮಾಜಿ ಅಧ್ಯಕ್ಷ ಕೆ.ಜಿ.ಪಾಟೀಲ್, ಕೆ.ಚಂದ್ರಶೇಖರಪ್ಪ, ಬಿ.ಎಚ್.ಬಸವರಾಜಪ್ಪ, ಗೌರವಾಧ್ಯಕ್ಷ ಎಚ್.ಆರ್.ಯೋಗೇಶಪ್ಪ, ಸಂಘಟನಾ ಕಾರ್ಯದರ್ಶಿ ಗಜೇಂದ್ರ ನಾಯಕ್, ಸಿ.ಎಸ್.ಜಯರಾಜ್, ಓಂಕಾರಪ್ಪ, ಲಕ್ಷ್ಮಮ್ಮ, ಶೇಷಯ್ಯ, ಎಚ್.ಸಿ.ಉಮೇಶ್ ಇತರರಿದ್ದರು.
ಕಾಪು ಶ್ರೀ ಮಾರಿಯಮ್ಮ ದೇವರ ಶ್ರದ್ಧಾಭಕ್ತಿಯ ಸೇವೆಯಿಂದ ಶ್ರೇಷ್ಠ ಫಲ ಪ್ರಾಪ್ತಿ