ವಿಶ್ವಕರ್ಮರಿಂದ ಸಮಾಜಕ್ಕೆ ಉತ್ತಮ ಕೊಡುಗೆ

ಶಿಗ್ಗಾಂವಿ: ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಇಂದಿಗೂ ಪಂಚ ಕಸುಬುಗಳನ್ನು ಅನುಸರಿಸುವ ಸಮುದಾಯ ಎಲ್ಲ ವರ್ಗದ ಜನರಿಗೂ ಅಗತ್ಯ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದು ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್. ಖಾದ್ರಿ ಹೇಳಿದರು.

ಪಟ್ಟಣದ ಸದ್ಗುರು ಮೌನೇಶ್ವರ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ವಿಶ್ವಕರ್ಮ ಸಮಿತಿ, ಸದ್ಗುರು ಮೌನೇಶ್ವರ ಜೀಣೋದ್ಧಾರ ಸಮಿತಿ ಹಾಗೂ ಶಿಗ್ಗಾಂವಿ ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಮತ್ತೊಬ್ಬರಿಗೆ ಸ್ಪೂರ್ತಿದಾಯಕ ಕಾಯಕ ಮಾಡುವ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ. ಕಲೆಗೆ ಕೀರ್ತಿ ಬರುವಂತೆ ಮಾಡುವವರು ವಿಶ್ವಕರ್ಮರು. ರೈತರ ಕೃಷಿ ಚಟುವಟಿಕೆಗಳ ಸಲಕರಣೆ ಮಾಡಿಕೊಡುವ ಮೂಲಕ ರೈತರ ಬದುಕಿಗೂ ಆಸರೆಯಾಗಿದ್ದಾರೆ ಎಂದರು.

ಸಮಾಜದ ಮುಖಂಡ ನಿಂಗಪ್ಪ ಕಮ್ಮಾರ ಮಾತನಾಡಿ, ಶಿಗ್ಗಾಂವಿ ಹಾಗೂ ಬಂಕಾಪೂರ ಪಟ್ಟಣಗಳಲ್ಲಿ ವಿಶ್ವಕರ್ಮರ ಮೂರ್ತಿ ಪ್ರತಿಷ್ಠ್ಠಾಪನೆಗೆ ಪುರಸಭೆಗಳಿಗೆ ಮನವಿ ಕೊಡಲಾಗಿದೆ. ಎಲ್ಲ ಸಮುದಾಯದ ಮುಖಂಡರು ಮತ್ತು ರಾಜಕಾರಣಿಗಳು ವಿಶ್ವಕರ್ಮರ ಮೂರ್ತಿ ಪ್ರತಿಷ್ಠಾಪನೆಗೆ ಕೈಜೋಡಿಸಬೇಕು ಎಂದರು.

ಹುಲಗೂರ ಮೌನೇಶ್ವರ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಡಿಗೇರ, ಪುರಸಭೆ ಸದಸ್ಯ ಸುಭಾಸ ಚೌಹಾಣ, ಆರ್.ವಿ. ಕಮ್ಮಾರ, ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಕಾಳಪ್ಪ ಬಡಿಗೇರ, ಮಂಜುನಾಥ ಬ್ಯಾಹಟ್ಟಿ, ಶಿವಾನಂದ ಸೊಬರದ, ಬಸನಗೌಡ ಮೇಲಿನಮನಿ, ಶಿವಾನಂದ ಬಾಗೂರ, ಮಲ್ಲಿಕಾರ್ಜುನ ಹಡಪದ, ಹನುಮರೆಡ್ಡಿ ನಡುವಿನಮನಿ, ದೇವಣ್ಣ ಚಾಕಲಬ್ಬಿ, ಚಿದಾನಂದ ಬಡಿಗೇರ, ಬಸವರಾಜ ಬಡಿಗೇರ ಇತರರು ಇದ್ದರು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…