ಕುರಿಗಾಹಿ ಮೇಲೆ ಎರಗಿದ ಚಿರತೆ

ಹೊಸಪೇಟೆ: ತಾಲೂಕಿನ ನೆಲ್ಲಾಪುರದ ಹತ್ತಿರ ಕುರಿ ಹಟ್ಟಿಯಲ್ಲಿ ಮಲಗಿದ್ದ ಕುರಿಗಾಹಿ ಯುವಕ ಚಿರತೆ ದಾಳಿಯಿಂದ ಶುಕ್ರವಾರ ತಡರಾತ್ರಿ ಗಾಯಗೊಂಡಿದ್ದಾನೆ. ಸ್ಥಳೀಯ ಗಾದಿಲಿಂಗ ಗಾಯಾಳು. ಕುರಿಹಟ್ಟಿಯಲ್ಲಿ ಗಾಢ ನಿದ್ರೆಯಲ್ಲಿದ್ದ ಗಾದಿಲಿಂಗ ಚಿರತೆ ದಾಳಿ ನಡೆಸಿ ಅನತಿ ದೂರದವರೆಗೆ ಎಳೆದೊಯ್ಯುವಾಗ ಚೀರಿದ್ದಾನೆ. ಎಚ್ಚರಗೊಂಡ ಇನ್ನುಳಿದ ಕುರಿಗಾಹಿಗಳು ಚಿರತೆ ಓಡಿಸಿ ಗಾದಿಲಿಂಗನನ್ನು ರಕ್ಷಿಸಿದ್ದಾರೆ. ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಗಾದಿಲಿಂಗಗೆ ಚಿಕಿತ್ಸೆ ನೀಡಿದ್ದು, ಎರಡು ಮೂರು ವಾರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಲೀಮ್ ತಿಳಿಸಿದ್ದಾರೆ. ಇದೇ ವೇಳೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.