ಟೆಂಪೋ ಹರಿದು 60ಕ್ಕೂ ಹೆಚ್ಚು ಕುರಿಗಳು ಸಾವು

ಚಿಕ್ಕಬಳ್ಳಾಪುರ: ಸರಕು ಸಾಗಣೆಯ ಟೆಂಪೋ ಹರಿದು 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ವಂಟರಿವಾಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಸರಕು ಸಾಗಣೆ ಟೆಂಪೋ ಕುರಿಗಳ ಮೇಲೆ ಹರಿದಿದೆ. ರೈತ ಸಿದ್ದಾರೆಡ್ಡಿಗೆ ಸೇರಿದ ಕುರಿಗಳಾಗಿದ್ದು ಅಪಾರ ನಷ್ಟವುಂಟಾಗಿದೆ. ಬಾಗೇಪಲ್ಲಿ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *