ಕೆ.ಆರ್.ಸಾಗರ: ಇಲ್ಲಿನ ಮದ್ದೂರ್ ಫೈಲ್ ನಲ್ಲಿ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ರಸ್ತೆಯಲ್ಲಿ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಶಿವಬೋರಯ್ಯ ಎಂಬುವರು ರಾತ್ರಿ 12 ಗಂಟೆ ವೇಳೆಯಲ್ಲಿ ಸಾರ್ವಜನಿಕ ರಸ್ತೆಗೆ ಕಂಬಗಳನ್ನು ನೆಟ್ಟು ಶೆಡ್ಡು ನಿರ್ಮಿಸಿದ್ದು, ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಆ ರಸ್ತೆಯಿಂದ ಮುಂದಕ್ಕೆ ಅಂಗನವಾಡಿ ಕೇಂದ್ರವಿದ್ದು, ಮಕ್ಕಳ ಕಲಿಕೆ ನಡೆಯುತ್ತಿದೆ. ಜತೆಗೆ ಹಲವು ಮನೆಗಳಿದ್ದು, ಈಗ ಮತ್ತಷ್ಟು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ರಸ್ತೆಯಲ್ಲೇ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದರು, ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಪಿಡಿಒ ಆಗಲಿ ಪ್ರಶ್ನಿಸಿ, ತೆರವುಗೊಳಿಸುವ ಬದಲಿಗೆ ಕೆಲವರು ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ಜತೆಗೆ ಇದೇ ರಸ್ತೆಯಲ್ಲಿ ಕೆಲವರು ಮನೆ, ಸ್ಟೇರ್ ಕೇಸ್ ಗಳನ್ನು ರಸ್ತೆಯಲ್ಲೇ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕೂಡ ಗ್ರಾಮ ಪಂಚಾಯಿತಿ ಕ್ಯಾರೆ ಅನ್ನುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.