ನವದೆಹಲಿ: ಮದುವೆಯಾಗು ಎಂದು ಈಕೆಯನ್ನು ಇಬ್ಬರು ಒತ್ತಾಯಿಸುತ್ತಿದ್ದರು. ಆದರೆ ಇಬ್ಬರ ಬೇಡಿಕೆಯನ್ನೂ ನಿರಾಕರಿಸಿದ್ದೇ ಈಕೆಯ ಸಾವಿಗೆ ಕಾರಣವಾಗಿದೆ. 25 ವರ್ಷದ ಈ ಯುವತಿ ಎರಡು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾಳೆ.
ಬ್ರಿಟಿಷ್ ಯುವತಿ ಮಯ್ರಾ ಜುಲ್ಫೀಕರ್ ಕೊಲೆಯಾದ ಯುವತಿ. ಈಕೆ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಗೀಡಾಗಿದ್ದಾಳೆ. ಪಾಕಿಸ್ತಾನದ ಲಾಹೋರ್ನ ಡಿಫೆನ್ಸ್ ಹೌಸಿಂಗ್ ಅಥಾರಿಟಿಗೆ ಸೇರಿದ ನಿವಾಸದಲ್ಲಿ ಈಕೆ ವಾಸವಾಗಿದ್ದಳು. ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಕೆಯ ಸ್ನೇಹಿತ ಅಸಾದ್ ಅಮೀರ್ ಬಟ್ ಬಗ್ಗೆ ಶಂಕೆ ಹೊಂದಿದ್ದಾರೆ.
ಮಯ್ರಾ ತನ್ನ ಗೆಳತಿ ಇಕ್ರಾ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಮಯ್ರಾ ಪೋಷಕರು ಯುಕೆಯಲ್ಲಿದ್ದು, ಈಕೆ ಮೂರು ತಿಂಗಳ ಹಿಂದೆ ಲಾಹೋರ್ಗೆ ಬಂದಿದ್ದಳು. ಮಯ್ರಾ ಕತ್ತು ಹಾಗೂ ತೋಳಿನ ಮೇಲೆ ಒಂದೊಂದು ಗುಂಡೇಟು ಬಿದ್ದಿದ್ದು, ಕೈ ಹಾಗೂ ಕಾಲಿನ ಮೇಲೆ ಪರಚಿದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಧೂಮಪಾನಿಗಳು-ಸಸ್ಯಾಹಾರಿಗಳಲ್ಲಿ ಕೋವಿಡ್ ಸೋಂಕು ಸಾಧ್ಯತೆ ಕಡಿಮೆ; ಸಿಎಸ್ಐಆರ್ ಸಮೀಕ್ಷೆಯಲ್ಲಿ ಬಹಿರಂಗ
ಮಯ್ರಾ ಅಂಕಲ್, ಲಾಹೋರ್ನಲ್ಲೇ ನೆಲೆಸಿರುವ ಮಹಮದ್ ನಜೀರ್, ಕೊಲೆಯಾಗುವ ಹಿಂದಿನ ದಿನ ಮಯ್ರಾ ತಮ್ಮ ಮನೆಗೆ ಬಂದಿದ್ದು, ಮದುವೆ ಆಗುವಂತೆ ಆಕೆಗೆ ಇಬ್ಬರು ಒತ್ತಾಯಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸಾದ್ ಅಮೀರ್ ಬಟ್ ಹಾಗೂ ಜಹೀದ್ ಜದೂನ್ ಎಂಬಿಬ್ಬರು ಮದುವೆ ಆಗುವಂತೆ ಒತ್ತಾಯಿಸಿದ್ದು, ಅದನ್ನು ಮಯ್ರಾ ನಿರಾಕರಿಸಿದ್ದಕ್ಕೆ ಅವರೇ ಈ ಕೊಲೆ ಮಾಡಿದ್ದಾರೆ ಎಂದು ನಜೀರ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ಈ ಮೇರೆಗೆ ಪೊಲೀಸರು ಆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.
ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…
ಗುಂಡ್ಲುಪೇಟೆ ತಾಲೂಕಾಸ್ಪತ್ರೆಯಲ್ಲಿ ಕೋವಿಡ್ ಮರಣಾತಂಕ; ನಾಲ್ವರು ಸೋಂಕಿತರ ಸಾವು, ಮೃತರ ಸಂಖ್ಯೆ 11ಕ್ಕೆ ಏರಿಕೆ