ಮುಂಬೈ: ಬಾಲಿವುಡ್ನ(Bollywood) ಚಲನಚಿತ್ರ ನಿರ್ಮಾಪಕಿ, ಕಥೆಗಾರ್ತಿ ಮತ್ತು ನಿರ್ದೇಶಕಿ ಹಾಗೂ ನಟ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಮುಂಬೈನ ಬಾಂದ್ರಾದಲ್ಲಿ ಅಪಾರ್ಟ್ಮೆಂಟ್ವೊಂದನ್ನು ಬಾಡಿಗೆ ಪಡೆದಿದ್ದು, ಪ್ರತಿ ತಿಂಗಳಿಗೆ ಬರೊಬ್ಬರಿ 6.5 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ ಎಂದು ವರದಿಯಾಗಿದೆ.
ಹೌದು, ಬಾಂದ್ರಾ ಪಶ್ಚಿಮದ ಪಾಲಿ ಹಿಲ್‌ನಲ್ಲಿರುವ ಆನಂದ್‌ನಲ್ಲಿ ಬಾಡಿಗೆ ತಗೆದುಕೊಂಡ ಅಪಾರ್ಟ್‌ಮೆಂಟ್. ಐದು ವರ್ಷಗಳ ಕಾಲ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದು 30 ಲಕ್ಷ ರೂ. ಭದ್ರತಾ ಠೇವಣಿ ಪಾವತಿಸಿದ್ದರು ಎಂದು ದಾಖಲೆಗಳು ತೋರಿಸಿವೆ. ಮೊದಲ ವರ್ಷ ಮಾಸಿಕ ಬಾಡಿಗೆ 6.5 ಲಕ್ಷ ರೂ. ಇದ್ದು, ಅದರಂತೆ ಎರಡನೇ ವರ್ಷ 6.82 ಲಕ್ಷ, ಮೂರನೇ ವರ್ಷ 7.16 ಲಕ್ಷ, ನಾಲ್ಕನೇ ವರ್ಷ 7.52 ಲಕ್ಷ, ಐದನೇ ವರ್ಷದಲ್ಲಿ 7.90 ಲಕ್ಷ ರೂ. ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಂಗೂರ ಬ್ಯಾರೇಜ್ ಸೋರಿಕೆಗೆ ಬ್ರೇಕ್; ಶಾಶ್ವತ ದುರಸ್ತಿಗೆ 2 ಕೋಟಿ ರೂ. ಯೋಜನೆಗೆ ಸಿದ್ಧತೆ; ವಿಜಯವಾಣಿ ವರದಿ ಪರಿಣಾಮ
ಇವರ ನಿರ್ದೇಶನದ ಲಾಪ್ತ ಲೇಡಿಸ್(ಲಾಸ್ಟ್ ಲೇಡಿಸ್) ಚಿತ್ರ ಅಂತರಾಷ್ಟ್ರಿಯ ಅತ್ಯುತ್ತಮ ಚಲನಚಿತ್ರ ಅಕಾಡಮಿ ಪ್ರಶಸ್ತಿಗೆ ಪ್ರವೇಶ ಪಡೆದಿದೆ. ಈ ಕಾರಣಕ್ಕಾಗಿ ಕಿರಣ್ ರಾವ್ ಸುದ್ದಿಯಲ್ಲಿದ್ದರು. ಇದೀಗ ಬಾಡಿಗೆ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇವರ ಸಿನಿಮಾ ವಿಚಾರಕ್ಕೆ ಬರುವುದಾದರೆ, 2025ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ನಾಮಕರಣಗೊಂಡ ಸಿನಿಮಾ ಲಾಪ್ತ ಲೇಡೀಸ್ (ಲಾಸ್ಟ್ ಲೇಡೀಸ್ ಎಂದು ಮರುನಾಮಕರಣ) ಆಗಿದೆ. ಕಿರಣ್ ರಾವ್ ನಿರ್ದೇಶಿಸಿದ ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿಂಡ್ಲಿಂಗ್ ಪಿಕ್ಚರ್ಸ್ ಹಾಗೂ ಜಿಯೋ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ,(ಏಜೆನ್ಸೀಸ್).