ಯುವ ಕೃಷಿಕ ಶಶಿಕುಮಾರ್​ ಬಿಗ್​ ಬಾಸ್​ ವಿನ್ನರ್​: ನವೀನ್​ ಸಜ್ಜು ರನ್ನರ್​

ಬೆಂಗಳೂರು: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ ಬಾಸ್​-6’ನಲ್ಲಿ ಯುವ ಕೃಷಿಕ ಶಶಿ ಕುಮಾರ್ ಅವರು ವಿನ್ನರ್​ ಆಗಿದ್ದಾರೆ. ಗಾಯಕ ನವೀನ್ ಸಜ್ಜು ಅವರು ರನ್ನರ್​ ಅಪ್​ ಆಗಿದ್ದಾರೆ.

ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್‌ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಿಗ್​ ಬಾಸ್​ ನಿರೂಪಕ, ನಟ ಸುದೀಪ್​ ಅವರು ವಿನ್ನರ್​ ಅನ್ನು ಘೋಷಣೆ ಮಾಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಶಶಿಕುಮಾರ್​ ವಿನ್ನರ್​ ಆಗಿರುವುದಾಗಿ ಸುದೀಪ್​ ಅವರು ಶಶಿ ಅವರ ಕೈ ಮೇಲೆತ್ತುವ ಮೂಲಕ ಪ್ರಕಟಿಸಿದರು. ಈ ಬಾರಿಯ ವಿನ್ನರ್​ ಆಗಲಿದ್ದಾರೆ ಎಂದು ಬಹುತೇಕರು ಭಾವಿಸಿಕೊಂಡಿದ್ದ ನವೀನ್​ ಸಜ್ಜು ರನ್ನರ್​ಅಪ್​ ಆಗಿರುವುದಾಗಿ ತಿಳಿಸಿದರು. ಇದೇ ವೇಳೆ, ನಟಿ ಕವಿತಾ ಅವರನ್ನು ಎರಡನೇ ರನ್ನರ್​ ಅಪ್​ ಎಂದು ಘೋಷಿಸಲಾಯಿತು.

ಬಿಗ್​ಬಾಸ್​ ವಿನ್ನರ್​ ಆದವರು 50 ಲಕ್ಷ ನಗದನ್ನು ಬಹುಮಾನವಾಗಿ ಪಡೆಯಲಿದ್ದಾರೆ.