ಪರಿಸರ ಸಂರಕ್ಷಣೆ ಮನೆಯಿಂದಲೇ ಆರಂಭವಾಗಲಿ

ಬಸವಕಲ್ಯಾಣ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಷ್ಟೇ ಅಲ್ಲ. ಇದು ದೇವತಾ ಕಾರ್ಯ ಎಂದು ಭಾವಿಸಬೇಕು. ಭವಿಷ್ಯದಲ್ಲಿ ಮಕ್ಕಳ ಸುರಕ್ಷತೆಗಾಗಿ ಪ್ರತಿ ಮನೆಯಿಂದಲೂ ಪರಿಸರ ಸಂರಕ್ಷಣೆ ಕಾರ್ಯ ಆರಂಭವಾಗಲಿ ಎಂದು ಪೂಜ್ಯಶ್ರೀ ಡಾ.ಗಂಗಾಂಬಿಕಾ ಅಕ್ಕ ನುಡಿದರು.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪರಿಸರ ದಿನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪರಿಸರದಲ್ಲಿ ಎರಡು ವಿಧ ಒಂದು ಬಾಹ್ಯ, ಇನ್ನೊಂದು ಆಂತರಿಕ ಬಾಹ್ಯ. ಪರಿಸರದ ಶುದ್ಧಿಗೆ ಗಿಡ-ಮರಗಳನ್ನು ಬೆಳೆಸುವುದು. ಕಾಡುಗಳ ವಿನಾಶ ತಪ್ಪಿಸಿ ಸರಳ ಸಾತ್ವಿಕ ಜೀವನ ನಡೆಸುವುದು. ಆಂತರಿಕ ಪರಿಸರದ ಶುಚಿತ್ವಕ್ಕೆ ಪ್ರಾರ್ಥನೆ. ಸತ್ಯ, ಪ್ರೇಮ ಸಹಿಷ್ಣತೆ ಸಹಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇವೆರಡು ಪರಿಸರದ ಶುದ್ಗಧಿಯೇ ಸಕಲ ಜೀವರಾಶಿಗಳ ಉನ್ನತಿಗೆ ಹಾದಿ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಪವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ ಮಾತನಾಡಿ, ಜಗತ್ತಿನ ಎಲ್ಲ ಸಾಹಿತ್ಯಕ್ಕೂ ವಚನ ಸಾಹಿತ್ಯ ಮೂಲ, ವಚನಗಳನ್ನು ಓದಿ ಅದರ ಸಾರಾಂಶ ತಿಳಿದುಕೊಳ್ಳಬೇಕು. ಅನೇಕ ವಚನಗಳಲ್ಲಿ ಶರಣರು ಪರಿಸರದ ಕುರಿತು ಹೇಳಿದ್ದಾರೆ. ಸಸಿಗೆ ಜೀವ ಕೊಡಿ ಸಸಿಯಿಂದ ಜೀವ ಪಡೆಯಿರಿ. ಮಾನವನ ಆಸೆಗಳನ್ನು ಪರಿಸರ ಪೂರೈಸುತ್ತದೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಸಾಹಿತಿ, ಪತ್ರಕರ್ತ ಡಾ. ರಘುಶಂಖ ಬಾತಂಬ್ರಾ ಮಾತನಾಡಿ, ಅಂಬಿಗರ ಚೌಡಯ್ಯ ನೇರನುಡಿ, ನಿರ್ಭಿಡೆಯ, ನಿಷ್ಠುರದ ಸ್ವಭಾದವರಾಗಿದ್ದರು. ವೃತ್ತಿಯಿಂದ ಅಂಬಿಗನಾದರೂ ಪ್ರವೃತ್ತಿಯಿಂದ ಅನುಭಾವಿ.ಚೌಡಯ್ಯನವರ ವಚನಗಳು ಮನುಷ್ಯನ ಬಾಳಿಗೆ ದಾರಿದೀಪವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ನಿರ್ದೇಶಕ ವೀರಣ್ಣಹಲಶೆಟ್ಟಿ, ಬೀದರ್‌ನ ನೀಲಮ್ಮನ ಬಳಗದ ಸುವರ್ಣಾ ಚಿಮಕೋಡೆ, ಬೀದರ್‌ನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಕು.ನೇಹಾ ವೀರಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಭರತ ವಾಘ್ಮಾರೆ ಮಾತನಾಡಿದರು. ಪತ್ರಕರ್ತ ಸಂಜುಕುಮಾರ ಜುನ್ನಾ, ದಿಲೀಪ ರುಮ್ಮಾ, ಶಾರದಾದೇವಿ ನಾಗರಾಳೆ, ಮಲ್ಲಿಕಾರ್ಜುನ ಸಂಗಮಕರ, ಫಂಡರಿನಾಥ ಹುಗ್ಗೆ ಇತರರಿದ್ದರು.
ವಿಶ್ರಾಂತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ರೇವಪ್ಪ ಪಂಚಾಳ ಮುಚಳಂಬ, ಜಗನ್ನಾಥ ಬೆಂದ್ರೆ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ಮಹಾಶಕ್ತಿಕೂಟ ಹರಳಯ್ಯ ಕಲ್ಯಾಣಮ್ಮ ಶರಣೆಯರು ಗುರುಪೂಜೆ, ಅಕ್ಕನ ಬಳಗದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಬೀದರ್‌ನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳು ಪ್ರಸ್ತುತ ಪಡಿಸಿದ ಪರಿಸರ ಸಂರಕ್ಷಣೆ ಕುರಿತು ರೂಪಕ ಸೇರಿದ ಜನರ ಮನಸೆಳೆಯಿತು.

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…