ಕಿಕ್ಕೇರಿ: ಇಲ್ಲಿನ ಹೊಯ್ಸಳರ ಕಾಲದ ಪಾರ್ವತಿದೇವಿಗೆ ಶರನ್ನವರಾತ್ರಿಯ 2ನೇ ದಿನದ ಶುಕ್ರವಾರ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಿಗೆ ನೈವೇದ್ಯವಾಗಿ ಪುಳಿಯೊಗರೆ, ಸಕ್ಕರೆ ನೈವೇದ್ಯ ಅರ್ಪಿಸಲಾಯಿತು. ವಿಶೇಷವಾಗಿ ಹಳದಿ, ಸೇವಂತಿಗೆ ಪುಷ್ಪ, ವಿವಿಧ ಆಭರಣಗಳಿಂದ ಶೃಂಗರಿಸಲಾಗಿತ್ತು.
ಗ್ರಾಮದ ಶುಖ, ಶಾಂತಿ ನೆಮ್ಮದಿಗೆ ಪ್ರಾರ್ಥಿಸಲಾಯಿತು. ಭಕ್ತರ ಆಯಸ್ಸು ವೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಆದಿತ್ಯ ಭಾರದ್ವಾಜ್ ಬ್ರಹ್ಮೇಶ್ವರ ದೇವರಿಗೆ ಶ್ವೇತವರ್ಣ ಅಲಂಕಾರ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಿದರು.