ಇಳಕಲ್ಲ (ಗ್ರಾ): ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಪಂ ಅಧ್ಯಕ್ಷೆ ಶರಣಮ್ಮ ಮೂಲಿಮನಿ ಮೇಲೆ ಅವಿಶ್ವಾಸ ಮಂಡಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಶಸ್ವಿಯಾದರು.
ತಹಸೀಲ್ದಾರ್ ಸತೀಶ ಕೂಡಲಗಿ ನೇತೃತ್ವದಲ್ಲಿ ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದಲ್ಲಿ 19 ಸದಸ್ಯರ ಬಲಯುಳ್ಳ ಗ್ರಾಮ ಪಂಚಾಯತಿಯಲ್ಲಿ 13 ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು. ಕೇವಲ 6 ಮತಗಳು ಮಾತ್ರ ಅಧ್ಯಕ್ಷೆಯ ಪರವಾಗಿ ಬಂದವು.
ಕಾಂಗ್ರೆಸ್ ಪಕ್ಷದಿಂದ ಹೊರಬಂದು ಎಸ್‌ಆರ್‌ಎನ್ ೌಂಡೇಶನ್ ಬೆಂಬಲಿತ ಸದಸ್ಯರಿಂದ ಅಧ್ಯಕ್ಷೆಯಾಗಿದ್ದ ಶರಣಮ್ಮ ಮೂಲಿಮನಿ ಅಧಿಕಾರ ಕಳೆದುಕೊಂಡರು.