ಚಿತ್ರ: ಛೂ ಮಂತರ್
ನಿರ್ದೇಶನ: ಕರ್ವ ನವನೀತ್
ನಿರ್ಮಾಣ: ತರುಣ್ ಶಿವಪ್ಪ
ತಾರಾಗಣ: ಶರಣ್, ಮೇನಾ ಗಾಂವ್ಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಪ್ರಭು ಮುಂಡ್ಕೂರ್, ರಜಿನಿ ಮುಂತಾದವರು.
ಹರ್ಷವರ್ಧನ್ ಬ್ಯಾಡನೂರು
ಹಾರರ್ ಜಾನರ್ ಅಂದಾಕ್ಷಣ ಒಂದು ಕಟ್ಟುಪಾಡನ್ನು ಸೃಷ್ಟಿಸಲಾಗಿದೆ. ಹೀಗೇ ಇರಬೇಕು, ಹಾಗೇ ಬರಬೇಕು ಎಂಬಂತೆ ಒಂದು ಗಡಿರೇಖೆಯಲ್ಲೇ ಮೂಡಿಬರುತ್ತವೆ. ಆದರೆ, “ಕರ್ವ’ ಖ್ಯಾತಿಯ ನವನೀತ್ ನಿರ್ದೇಶನದ “ಛೂ ಮಂತರ್’ ಆ ಕಟ್ಟಳೆಗಳನ್ನು ಮೀರಿದ ಸಿನಿಮಾ.
ಡೈನಾಮೊ (ಶರಣ್), ಆರ್ಜೆ (ಚಿಕ್ಕಣ್ಣ), ಆಕಾಂಾ (ಅದಿತಿ) ಮತ್ತು ನಕುಲ್ ಛೂಮಂತರ್ ಆ್ಯಂಡ್ ಕಂಪನಿ ಎಂಬ ಘೋಸ್ಟ್ ಹಂಟರ್ ತಂಡ ಕಟ್ಟಿಕೊಂಡು, ಆತ್ಮಗಳ ಬೇಟೆ ನಡೆಸುತ್ತಿರುತ್ತಾರೆ. ಕೆಲವೆಡೆ ನಿಜವಾದ ಭೂತ&ಪ್ರೇತಗಳು ಎದುರಾದರೂ, ಕೆಲವೆಡೆ ಕಳ್ಳ ಆತ್ಮಗಳ ನಾಟಕಗಳನ್ನೂ ಬಯಲು ಮಾಡಿರುತ್ತಾರೆ. ಅವರಿಗೆ ಭಾರತದ ಟಾಪ್ 10 ಹಾಂಟೆಡ್ ಹೌಸ್ಗಳ ಸಾಲಿಗೆ ಉತ್ತರಾಖಂಡದ ನೈನಿತಾಲ್ನಲ್ಲಿರುವ ಮಾರ್ಗನ್ ಹೌಸ್ ಸೇರ್ಪಡೆಯಾಗಿರುವ ವಿಷಯ ತಿಳಿಯುತ್ತದೆ. ಅಲ್ಲಿ ಬ್ರಿಟಿಷರ ಕಾಲದ ನಿಧಿ ಇರುವುದು ಗೊತ್ತಾಗಿ, ಅದರ ಬೆನ್ನತ್ತಿ ಹೊರಡುತ್ತಾರೆ. ಆದರೆ, ಮಾರ್ಗನ್ ಹೌಸ್ ಹೆಸರು ಕೇಳಿದರೆ ಸಾಕು ಸುತ್ತಮುತ್ತಲಿನ ಜನ ಹೆದರಿ ಥರಗುಟ್ಟುತ್ತಿರುತ್ತಾರೆ. ಅದರ ಇತಿಹಾಸ ಕೆದಕಿದಾಗ, 20 ವರ್ಷಗಳ ಹಿಂದೆ 2004ರಲ್ಲಿ ಭಾರತ ಮೂಲದ ಲಂಡನ್ನ ಶ್ರೀಮಂತ ಉದ್ಯಮಿ ವಿಕ್ಟರ್ ಡಿಕೋಸ್ಟಾ ನಿಧನದ ಬಳಿಕ ಆತನ ಪುತ್ರ ಅಲೆಕ್ಸ್ (ಪ್ರಭು), ಪತ್ನಿ ಕ್ಯಾಥರೀನ್ (ಮೇನಾ), ಪುತ್ರಿ ಮತ್ತು ತಾಯಿ ಜತೆ ಭಾರತಕ್ಕೆ ಮರಳುತ್ತಾರೆ. ಅವರಿಗೆ ಮಾರ್ಗನ್ ಹೌಸ್ನಲ್ಲಿ ಅತೀಂದ್ರೀಯ ಶಕ್ತಿಗಳು ಕಾಟಕೊಡತೊಡಗುತ್ತವೆ. ಅದಕ್ಕೆ ಕಾರಣ ಹುಡುಕಿ ಹೊರಟಾಗ ಡೈನಾಮೊ 1945ರ ಬ್ರಿಟಿಷ್ ಅಧಿಕಾರಿ ಮಾರ್ಗನ್ ಮತ್ತು ಹಳ್ಳಿ ಹುಡುಗಿ ಮೊಗರಾ ಪ್ರೇಮಕಥೆ ಅನಾವರಣವಾಗುತ್ತದೆ. ಹೀಗೆ ಮೂರು ಕಾಲಟ್ಟಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಅವುಗಳ ನಡುವೆ ಏನಾದರೂ ಲಿಂಕ್ ಇದೆಯಾ? 1945ರಲ್ಲಿ ನಡೆದ ದುರ್ಟನೆಯೇನು? 2004ರಲ್ಲಿ ಅಲ್ಲಿಗೆ ಬಂದ ಡಿಕೋಸ್ಟಾ ಕುಟುಂಬ ಏನಾಯಿತು? ಅಲ್ಲಿ ನಿಜವಾಗಲೂ ದೆವ್ವದ ಕಾಟವಿದೆಯಾ? ಅಥವಾ ಎಲ್ಲವೂ ಭ್ರಮೆಯಾ? ಹೀಗೆ ಹಲವು ಪ್ರಶ್ನೆಗಳನ್ನು ಮೂಡಿಸುತ್ತಾ ಥ್ರಿಲ್ಲಿಂಗ್ ಟ್ವಿಸ್ಟ್ಗಳ ಮೂಲಕ ಉತ್ತರಗಳನ್ನು ನೀಡುತ್ತಾ ಹೋಗುತ್ತಾರೆ ನಿರ್ದೇಶಕ ನವನೀತ್.
ಹಾರರ್ ಅಂಶಗಳ ಜತೆಗೆ ಚಿತ್ರದಲ್ಲಿ ಶರಣ್ ಮತ್ತು ಚಿಕ್ಕಣ್ಣ ಕೆಮಿಸ್ಟ್ರಿ ಹೈಲೈಟ್. ಬಹುಶ@ ನಾಯಕ, ನಾಯಕಿಯ ನಡುವೆಯೂ ಇಲ್ಲದಷ್ಟು ಈ ಜೋಡಿಯ ಮ್ಯಾಜಿಕಲ್ ಕೆಮಿಸ್ಟ್ರಿ ನಗೆಗಡಲಲ್ಲಿ ತೇಲಿಸುತ್ತದೆ. ಮೊದರ್ಲಧ ಹಾಲಿವುಡ್ ಹಾರರ್ ಚಿತ್ರಗಳನ್ನು ನೆನಪಿಸಿದರೆ, ದ್ವೀತಿಯಾರ್ಧ ಸ್ವಲ್ಪ ನಿಧಾನವೆನಿಸಿ, ಟ್ರ್ಯಾಕ್ ಮಿಸ್ ಆದರೂ, ಊಹಿಸಲಾಗದ ಟ್ವಿಸ್ಟ್ಗಳ ಮೂಲಕ ಸೀಟಂಚಲ್ಲಿ ಕೂರಿಸುತ್ತದೆ. ಹಾಗೇ ಕ್ಲೆಮ್ಯಾಕ್ಸ್ ಮುಗಿದ ಮೇಲೊಂದು ಕ್ಲೆಮ್ಯಾಕ್ಸ್ ಇದ್ದು, ಅದು ಕೂಡ ಚಿತ್ರದ ಹೈಲೈಟ್ಗಳಲ್ಲೊಂದು. ಹಾರರ್ ಮತ್ತು ಕಾಮಿಡಿ ಪ್ರಿಯರಿಗೆ “ಛೂ ಮಂತರ್’ ುಲ್ ಮೀಲ್ಸ್ ಎನ್ನಬಹುದು.