ಹುಬ್ಬಳ್ಳಿ: ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು ಮತ್ತು ಮಾತೆ ಮಹಾದೇವಿ ಅವರು ಬಸವಾದಿ ಶರಣರ ತತ್ವಗಳನ್ನು ವಿಶ್ವಖ್ಯಾತಿಗೆ ತರುವಲ್ಲಿ ತಮ್ಮ ಉಸಿರಿರುವರೆಗೂ ಶ್ರಮಿಸಿದರು ಎಂದು ರಾಷ್ಟ್ರೀಯ ಬಸವದಳದ ಮಹಾ ಸಂಘಟನಾ ಕಾರ್ಯದರ್ಶಿ ಗಂಗಾಧರ ದೊಡ್ಡವಾಡ ಹೇಳಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಸುಕ್ಷೇತ್ರದಲ್ಲಿ ಜರುಗಿದ ಸ್ವಾಭಿಮಾನಿ ಶರಣಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿಸಬೇಕೆಂದು ಅವರು ಹೋರಾಡಿದರು. ಲಿಂಗಾಯತವು ಯಾವುದೇ ಒಂದು ಧರ್ಮದ ಅಡಿಯಲ್ಲಿ ಬೆಳೆಯುವ ಪಂಗಡವಲ್ಲ ಅದೊಂದು ಸ್ವತಂತ್ರ ಧರ್ಮ ಎಂದು ಅವರು ಪ್ರತಿಪಾದಿಸಿದ್ದರು ಎಂದರು.
ಇಂತಹ ಮಹಾನ್ ದಾರ್ಶನಿಕರ ತತ್ವ ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಜಗದ್ಗುರು ಚನ್ನಬಸವಾನಂದರು, ಮಾತೆ ಸತ್ಯಕ್ಕನವರು ಅಹೋ ರಾತ್ರಿ ಶ್ರಮಿಸುತ್ತಿದ್ದಾರೆ ಎಂದರು.
ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ, ಬೆಂಗಳೂರಿನ ಶ್ರೀ ಜಯಾನಂದ ಸ್ವಾಮೀಜಿ, ಶರಣ ಬಸನಗೌಡ ಪಾಟೀಲ್, ಶಿವಪೂರ ಮಾತೆ, ಸಾವಿತ್ರಮ್ಮ ಮಾತೆ, ಶಾಂತಾದೇವಿ, ಮುಂತಾದವರು ಇದ್ದರು.