ವಿಜಯಪುರ: ಪ್ರಸ್ತುತ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿದು ಅತ್ಯಂತ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಜಾನಪದ ಹಾಗೂ ಶರಣ ಸಾಹಿತ್ಯಗಳು ಸಮಾಜಕ್ಕೆ ದಾರಿದೀಪ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ ಹೇಳಿದರು.
ನಗರದ ವೀರಶೈವ ಲಿಂಗಾಯತ ಮಹಾಸಭಾ ಸಮುದಾಯ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ, ಡಾ. ಎಂ.ಎನ್. ವಾಲಿ ಪ್ರತಿಷ್ಠಾನ ಹಾಗೂ ಯುಗದರ್ಶಿನಿ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಸಾಹಿತ್ಯೋತ್ಸವ ಮತ್ತು ಶರಣ ಸಾಹಿತ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಶಾರದಾ ಐಹೊಳೆ ಮಾತನಾಡಿ, ಭಾರತವು ಭವ್ಯ ಸಂಸತಿಯ ಆಗರ. ಇಲ್ಲಿ ಜಾನಪದ ಮತ್ತು ಶರಣ ಸಾಹಿತ್ಯ ಶ್ರೇಷ್ಠ ಸಾಹಿತ್ಯ. ನಾವು ಈ ಎರಡೂ ಸಾಹಿತ್ಯಗಳನ್ನು ಅಧ್ಯಯನ ಮಾಡಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸುಂದರವಾಗುತ್ತದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಮಪ್ಪ ಉಪ್ಪಿನ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಸುಶೀಲೇಂದ್ರ ನಾಯಕ ಹಾಗೂ ಮಹೇಶ ಶಟಗಾರ, ಹಿರಿಯ ಸಾಹಿತಿ ಪ್ರಭಾವತಿ ದೇಸಾಯಿ ಮತ್ತು ಉದ್ಯಮಿ ಅನುಸೂಯ ಹಿಟ್ಟಿನಹಳ್ಳಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಬಸಲಿಂಗ ಸಾರವಾಡ ಪ್ರಾರ್ಥಿಸಿದರು. ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಆಕಾಶ ರಾಮತೀರ್ಥ ವಂದಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಸರಸ್ವತಿ ಚಿಮ್ಮಲಗಿ, ಅಶೋಕ ವಾಲಿ, ಬಿ.ಎನ್. ಪಾಟೀಲ, ಉಷಾದೇವಿ ಹಿರೇಮಠ, ಶಕುಂತಲಾ ಮೊಸಲಿಗೆ, ಬಸವರಾಜ ಇಂಚಿಗೇರಿ, ಕುಮಾರ ಡುಮಗಾರ, ವಿದ್ಯಾವತಿ ಅಂಕಲಗಿ, ದಾಾಯಿಣಿ ಬಿರಾದಾರ ಮತ್ತಿತರರಿದ್ದರು.