More

    ಸ್ಟಾರ್ ಸಂಭ್ರಮ 2020: ಸುತ್ತಾಡುವುದೇ ಚಂದ

    ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ. 

    ಹೊಸ ವರ್ಷದ ದಿನ ನಾನು ನಮ್ಮ ಇಡೀ ಕುಟುಂಬದ ಜತೆಗೆ ಪ್ರವಾಸಿ ತಾಣ, ದೇವಸ್ಥಾನ, ಬೇರೆ ಬೇರೆ ಊರಲ್ಲಿನ ಸಂಬಂಧಿಕರ ಮನೆಗೆ ಹೋಗಿ ಬರುವುದು ವಾಡಿಕೆ. ಅದನ್ನು ಈ ವರ್ಷವೂ ಮಾಡುತ್ತಿದ್ದೇವೆ. ಸದ್ಯ ಪ್ರವಾಸದಲ್ಲೇ ಇದ್ದೇವೆ. ಧರ್ಮಸ್ಥಳ ಮಂಜುನಾಥನ ದರ್ಶನ ಮುಗಿದಿದೆ. ಇನ್ನೂ ಮೂರ್ನಾಲ್ಕು ದಿನ ಕುಟುಂಬದೊಂದಿಗಿನ ಪ್ರವಾಸ ಮುಂದುವರಿಯಲಿದೆ.

    2019 ಒಂದಷ್ಟು ಹೊಸ ಕನಸುಗಳಿಗೆ ಬಾಗಿಲು ತೆರೆದುಕೊಟ್ಟಿದೆ. ಹೊಸ ಬದಲಾವಣೆ, ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧನಾಗಬೇಕಿದೆ. ಅದರಲ್ಲಿ ಮೊದಲನೆಯದು ಸಂಗೀತ ಕ್ಷೇತ್ರ. ಧಾರಾವಾಹಿ, ಸಿನಿಮಾಕ್ಕೆ ಬರುವ ಮುನ್ನ ನಾನು ಆರ್ಕೆಸ್ಟ್ರಾದಲ್ಲಿ ಇದ್ದವನು. ಸದಾ ಹಾಡುವುದು ನನ್ನ ಕಾಯಕವಾಗಿತ್ತು. ಸಿನಿಮಾಗೆ ಬಂದ ಮೇಲೆ ಅದೆಲ್ಲ ಹಿಂದೆ ಉಳಿಯುತ್ತ ಬಂತು. ಈ ವರ್ಷ ಸಂಗೀತಕ್ಕೂ ಸಮಯ ಮಾಡಿಕೊಳ್ಳಬೇಕು, ಮತ್ತೆ ಹಾಡಬೇಕು. ಕುಟುಂಬದೊಟ್ಟಿಗೆ ಹೆಚ್ಚು ಸಮಯ ಕಳೆಯಬೇಕು ಎಂದುಕೊಂಡಿದ್ದೇನೆ.

    | ಶರಣ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts