ಅಳವಂಡಿ: ಸಮೀಪದ ಗುಡಗೇರಿಯಲ್ಲಿ ಶ್ರೀ ಶರಣ ಬಸವೇಶ್ವರ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ: ಶರಣರ ಮಾರ್ಗದಲ್ಲಿ ಮುನ್ನಡೆಯೋಣ
ಪುರಾಣ ಮಂಗಲೋತ್ಸವ ಅಂಗವಾಗಿ ಬೆಳಗ್ಗೆ ಶರಣ ಬಸವೇಶ್ವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿ, ಮಹಾ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ತಳಿರು, ತೋರಣ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿದ ಶರಣಬಸವೇಶ್ವರ ಅಡ್ಡಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯಮೇಗಳು ಪಾಲ್ಗೊಂಡಿದ್ದವು. ಪ್ರಮುಖರಾದ ಬಸವರಾಜ ಆಡೂರ, ಈಶ್ವರಗೌಡ ಶರಭಗೌಡ್ರ, ಶಂಕ್ರಯ್ಯ, ಶರಣಯ್ಯ, ಮಹಾಂತೇಶ ಹಿರೇಮಠ, ಈರಣ್ಣ ಶರಭಗೌಡ್ರ,
ವಿರೂಪಾಕ್ಷಪ್ಪ ಬನ್ನಿಕೊಪ್ಪ, ವೆಂಕಣ್ಣ, ಶರಣಪ್ಪ ತೋಟದ, ರವಿಕುಮಾರ ಅಂಬಳಿ, ಶಂಕರ ತೋಟದ, ಬಸವರಾಜ ಆಡೂರ, ವಿರುಪಣ್ಣ ವುಟಗನೂರ, ಚನ್ನಪ್ಪ ವುಟಗನೂರ ಇದ್ದರು.