ಉಳ್ಳಾಗಡ್ಡಿ-ಖಾನಾಪುರ: ಯಮಕನಮರಡಿ ವಲಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾರದಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
ಹೂವಿನ ಮಳೆಗೈದು ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಸಮವಸ್ತ್ರ ಹಾಗೂ ಪಠ್ಯ-ಪುಸ್ತಕ ವಿತರಿಸಲಾಯಿತು. ಯಮಕನಮರಡಿಯ ಜಿ.ಎಂ.ಎಚ್ ಶಾಲೆಯಲ್ಲಿ ಕುಶಾಲ ರಜಪೂತ ಪೂಜೆ ನೆರವೇರಿಸಿದರು. ವೀರಭದ್ರ ಜಿಂಡ್ರಾಳಿ, ಜೆ.ಎನ್.ಅವಾಡೆ, ಮುಖ್ಯ ಶಿಕ್ಷಕ ಜಿ.ಎಸ್.ಹುನ್ನರಗಿ, ಎ.ಎಸ್.ಗುತ್ತಿ ಇತರರಿದ್ದರು.