ಹುಬ್ಬಳ್ಳಿ: ಇಲ್ಲಿಯ ಎಸ್ ಜೆಆರ್ ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಅತಿಥಿಯಾಗಿದ್ದ ಡಾ. ಸುನೀಲ ಕರಿ ಮಾತನಾಡಿ, ಎಲ್ಲಕ್ಕಿಂತ ಮೊದಲು ನಾವೆಲ್ಲ ಭಾರತೀಯರು ಎಂಬ ಹೆಮ್ಮೆ ಇರಬೇಕು. ದೇಶಕ್ಕಾಗಿ ದುಡಿಯುವ ಛಲ ಇರಬೇಕು. ಗಣರಾಜ್ಯೋತ್ಸವ ದಿನ ಎಂದರೆ ನಮಗೆಲ್ಲ ಅತ್ಯಂತ ಮಹತ್ವದ ದಿನ ಎಂದರು.
ಅತಿಥಿಯಾಗಿದ್ದ ಅರುಣಕುಮಾರ ಮಹಾಜನಶೇಟ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮೋಕ್ಷ ಜೈನ, ಅತ್ಯುತ್ತಮ ವಿದ್ಯಾರ್ಥಿ ಯುವರಾಜ ಕತ್ರಿ, ಉತ್ತಮ ಕ್ರೀಡಾಪಟು ಇಶಾ ಹಾನಗಲ್ಲ, ಶಾಂತಿನಾಥ ಹಿಂದಿ ಹೈಸ್ಕೂಲಿನ ಉತ್ತಮ ವಿದ್ಯಾರ್ಥಿನಿ ಮನ್ನತ ರಾಜಪುರೋಹಿತ, ದ್ವೀತಿಯ ಪಿಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಂತಿನಿಕೇತನ ಪಿಯು ಕಾಲೇಜಿನ ನಿಖಿತಾ ರಾಜಪುರೋಹಿತ ಅವರಿಗೆ ಬಂಗಾರದ ನಾಣ್ಯ ನೀಡಿ ಪ್ರೋತ್ಸಾಹಿಸಿದರು.
ಶಾಲೆ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಭಾರತೀಯ ಪ್ರಜೆಗಳಾದ ನಾವೆಲ್ಲರೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸನ್ನದ್ಧರಾಗಬೇಕು. ಮಾಡುವ ಕೆಲಸವು ಶ್ರದ್ಧೆ, ಪರಿಶ್ರಮದಿಂದ ಕೂಡಿರಬೇಕು ಎಂದು ಹೇಳಿದರು.
ಮನೋಜಭಾಯ್ ಗುಗಲಿಯಾ ಅವರು ಮಕ್ಕಳಿಗೆ ಸಿಹಿ ಹಂಚಿದರು.
ಮಂಡಳದ ಉಪಾಧ್ಯಕ್ಷ ಮಹೇಂದ್ರಕುಮಾರ ಪಾಲ್ಗೋತಾ, ಕೋಶಾಧಿಕಾರಿ ಪುರಣಕುಮಾರ ನಹಟಾ, ಜಂಟಿ ಕಾರ್ಯದರ್ಶಿ ಭರತ ಜೈನ್, ನಿರ್ದೇಶಕರಾದ ಮಹಾವೀರ ಜೈನ, ಪ್ರವೇಶ ಕೊಠಾರಿ, ಅಶ್ವಿನಕುಮಾರ ಜೈನ, ದಾನೇಶಕುಮಾರ ಕಟಾರಿಯಾ, ಪ್ರಾಚಾರ್ಯ ಡಾ. ಕ್ಯಾಥರೀನ್ ದಿನೇಶ, ಇತರರು ಇದ್ದರು.