ತಮ್ಮ ತಂದೆಯ ಭಾವಚಿತ್ರ ನೋಡಿ ಭಾವುಕರಾದ ಶಂಕರ್​​​ ಅಶ್ವಥ್​​

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಅಶ್ವಥ್​ ಅವರ ಪುತ್ರ ಶಂಕರ್​​ ಅಶ್ವಥ್​ ಅವರು ಮೈಸೂರಿನಲ್ಲಿ ಉಬರ್​​ ಚಾಲನೆ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಿಗುವ ಅಪರೂಪದ ಚಿತ್ರಗಳನ್ನು ಮಾಡಿಕೊಂಡು ಉಬರ್​​​ ಚಾಲಕನಾಗಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.

ಚಂದನವನದ ಖ್ಯಾತ ನಟ ಅಶ್ವಥ್​ ಅವರ ಉಬರ್​​ ಚಾಲನೆ ಮಾಡುತ್ತಿದ್ದಾರೆ ಎಂದು ಈ ಹಿಂದೆ ಬಹಳ ದೊಡ್ಡ ಸುದ್ದಿಯಾಗಿತ್ತು. ಸಿನಿಮಾಗಳಲ್ಲಿ ಸೂಕ್ತ ಅವಕಾಶಗಳು ದೊರೆಯದೆ ನ್ಯಾಯಯುತವಾಗಿ ದುಡಿದು ಜೀವನ ಮಾಡುತ್ತಿದ್ದೇನೆ ಎಂದು ಅವರೇ ಹೇಳಿದ್ದರು. ಇತ್ತೀಚೆಗೆ ಬಿಡುಗಡೆಯಾದ ದರ್ಶನ್​​ ಅವರ ಯಜಮಾನ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸದ್ಯ ಅವರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ವಾಹನ ಚಾಲನೆ ಮಾಡುವಾಗ ಅನಿರೀಕ್ಷಿತವಾಗಿ ತಂದೆಯ ಪೋಟೊ ಕಂಡು ಭಾವುಕಾರಾಗಿದ್ದಾರೆ. ಈ ಬಗ್ಗೆ ತಮ್ಮ ಫೇಸ್​ಬುಕ್​​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ನನ್ನ ತಂದೆ ನನ್ನನ್ನು ನೋಡಿ ಶಭಾಷ್ ಮಗನೇ, ನ್ಯಾಯವಾಗಿ ಧರ್ಮವಾಗಿ ನನಗೆ ಇಷ್ಟವಾದ ರೀತಿಯಲ್ಲಿ ಬದುಕುತ್ತಿದ್ದೀಯಾ ಎಂದರೇನೋ ಅನ್ನಿಸಿತು. ಇವತ್ತು ಉಬರ್ ಸೇವೆಯಲ್ಲಿ ತೊಡಗಿದ್ದಾಗ ದಾರಿಯಲ್ಲಿ ಯಾರೋ ಮಹಾನುಭಾವರು ನನ್ನ ತಂದೆಯ ಫೋಟೋನ ಗೋಡೆ ಮೇಲೆ ಲ್ಯಾಮಿನೇಟ್ ಮಾಡಿ ಹಾಕಿಸಿದ್ದಾರೆ, ಅಲ್ಲಿ ಒಂದು ಕ್ಷಣ ನಿಂತು ಹೃದಯಪೂರ್ವಕವಾಗಿ ನಮಿಸಿ ಮುಂದೆ ಹೊರಟೆ” ಎಂದು ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ.  ಶಂಕರ್​ ಅವರ ಫೋಸ್ಟ್​​ಗೆ ಅನೇಕರು ಲೈಕ್​​​​​ ಹಾಗೂ ಕಾಮೆಂಟ್​​ ಮಾಡಿದ್ದಾರೆ.

https://www.facebook.com/shankaraswath7/photos/a.873271889456171/2122956667821014/?type=3&theater

Leave a Reply

Your email address will not be published. Required fields are marked *