ಒಂದು ವರ್ಷ ಡ್ರೈವಿಂಗ್​ ಮಾಡದಂತೆ​ ಕ್ರಿಕೆಟ್​ ದಿಗ್ಗಜ ಶೇನ್​ ವಾರ್ನ್​ಗೆ ಕೋರ್ಟ್​ ಆದೇಶ ನೀಡಿದ್ದೇಕೆ? ​

ನವದೆಹಲಿ: ಅತಿವೇಗದಿಂದ ವಾಹನ ಚಲಾಯಿಸಿದ್ದಕ್ಕೆ ಕ್ರಿಕೆಟ್​ ದಿಗ್ಗಜ ಹಾಗೂ ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್​ ಅವರಿಗೆ 12 ತಿಂಗಳು ಕಾಲ ಡ್ರೈವಿಂಗ್​ನಿಂದ ಬ್ಯಾನ್​ ಮಾಡಲಾಗಿದೆ.

ಸೋಮವಾರ ವಿಂಬಲ್ಡನ್​ನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರಾದ 50 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​, ತಾವು ಅತಿವೇಗದಿಂದ ಚಾಲನೆ ಮಾಡಿದ್ದನ್ನು ತಪ್ಪೊಪ್ಪಿಕೊಂಡರು. ಕಳೆದ ಆಗಸ್ಟ್​ ತಿಂಗಳಲ್ಲಿ ಕಿಂಗ್​​ಸ್ಟನ್​ನಲ್ಲಿ ತಮ್ಮ ಜಾಗ್ವಾರ್​ ಕಾರಿನಲ್ಲಿ ತೆರಳುತ್ತಿದ್ದ ಶೇನ್​ ವಾರ್ನ್​, ಗಂಟೆಗೆ 40 ಮೈಲಿ ವೇಗದಲ್ಲಿ ಚಾಲನೆ ಮಾಡಬೇಕಾದ ರಸ್ತೆಯಲ್ಲಿ ಗಂಟೆಗೆ 47 ಮೈಲಿಯಲ್ಲಿ ಚಾಲನೆ ಮಾಡುವ ಮೂಲಕ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ವಿಚಾರಣೆಗೆ ಹಾಜರಾಗದ ವಾರ್ನ್​ ಅವರ ಲೈಸೆನ್ಸ್​ ಮೇಲೆ ಈಗಾಗಲೇ 15 ಪೆನಾಲ್ಟಿ ಅಂಕಗಳಿವೆ. 2016ರ ಏಪ್ರಿಲ್​ನಿಂದ ಈವರೆಗೆ ಅತಿವೇಗದ 5 ಅಪರಾಧಗಳನ್ನು ವಾರ್ನ್​ ಎಸಗಿದ್ದಾರೆ. ಹೀಗಾಗಿ 1,845 ಪೌಂಡ್​ ದಂಡವನ್ನು ನ್ಯಾಯಾಲಯಕ್ಕೆ ಪಾವತಿಸುವಂತೆ ಕೋರ್ಟ್​ ಆದೇಶಿಸಿದ್ದು, 12 ತಿಂಗಳು ಡ್ರೈವಿಂಗ್​ನಿಂದ ಬ್ಯಾನ್​ ಮಾಡಿದೆ.

ಕ್ರಿಕೆಟ್​ ಇತಿಹಾಸದಲ್ಲಿ ಉತ್ತಮ ಬೌಲರ್​ ಎನಿಸಿಕೊಂಡಿರುವ ಆಸಿಸ್​ನ ಲೆಗ್​ ಸ್ಪಿನ್ನರ್​ ಶೇನ್​ ವಾರ್ನ್​, 1992 ಮತ್ತು 2007ರ ನಡುವಿನ ಅಂತರದಲ್ಲಿ 145 ಟೆಸ್ಟ್​ ಪಂದ್ಯಗಳಲ್ಲಿ 708 ವಿಕೆಟ್​ ಕಬಳಿಸಿ ತಮ್ಮದೆಯಾದ ದಾಖಲೆ ಬರೆದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *