ಷೇರುದಾರರಿಗೆ ಅವಮಾನ

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಅನರ್ಹತೆಗೆ ರೈತ ಸಂಘ ಪಟ್ಟು


ಗುಡಿಬಂಡೆ : ಷೇರುದಾರರನ್ನು ಕಿಡಿಗೇಡಿಗಳು ಎಂದು ಆಡಳಿತ ಮಂಡಳಿ ನಿರ್ದೇಶಕರು ಅವಮಾನಿಸಿದ್ದು, ಕೂಡಲೇ ಅವರ ಸ್ಥಾನವನ್ನು ಅನರ್ಹಗೊಳಿಸಬೇಕು. ಹಾಗೆಯೇ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ರಾಮನಾಥ್ ಮಾತನಾಡಿ, ಸೆ.12ರಂದು ಬ್ಯಾಂಕಿನ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಸಭೆಗೆ ಹಾಜರಾಗುವಂತೆ 4893 ಷೇರುದಾರರಿಗೆ ಆಹ್ವಾನ ನೀಡಿದ್ದು, ಕೇವಲ 400 ಆಸನಗಳ ವ್ಯವಸ್ಥೆ ಮಾಡಿ ಸಭೆಯುದ್ದಕ್ಕೂ ರೈತರು ನಿಲ್ಲುವಂತೆ ಮಾಡಿ ಅವಮಾನಿಸಿದ್ದಾರೆ ಎಂದರು.
ಬ್ಯಾಂಕ್ ಆರಂಭವಾದಾಗಿನಿಂದಲೂ 1880 ಪ್ರಭಾವಿ ಹಾಗೂ ರಾಜಕೀಯ ಬಲಾಢ್ಯರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹೊಸ ರೈತರಿಗೆ ಸಾಲದ ಸೌಲಭ್ಯ ನೀಡಿಲ್ಲ. ಜತೆಗೆ 4893 ಷೇರುದಾರರ ಪೈಕಿ ವಿವಿಧ ಕಾರಣಗಳನ್ನು ಹೇಳಿ 4243 ಷೇರುದಾರರನ್ನು ಆನರ್ಹಗೊಳಿಸಿ ಕೇವಲ 650 ಷೇರುದಾರರಿಗೆ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದರು.
ಈ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದಾಗ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಗಳು ಉಡಾಫೆ ಉತ್ತರ ನೀಡಿದ್ದರಿಂದ ನಾವುಗಳು ಸಭೆ ಬಹಿಷ್ಕರಿಸಿದೆವು. ಆದರೆ, ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದಾರೆ. ಜತೆಗೆ ನಮ್ಮನ್ನು ಕಿಡಿಗೇಡಿಗಳು ಎಂದು ನಿಂದಿಸಿದ್ದಾರೆ. ಆದ್ದರಿಂದ ಅವರನ್ನು ಅನರ್ಹಗೊಳಿಸಬೇಕು ಹಾಗೂ ಮತ್ತೊಮ್ಮೆ ಸರ್ವ ಸದಸ್ಯರ ಸಾಮಾನ್ಯ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ದ್ವಾರಕಾನಾಥ್ ನಾಯ್ಡು ಮಾತನಾಡಿ, ವಾರ್ಷಿಕ ಮಹಾಸಭೆಯನ್ನು ಬಹಿಷ್ಕಾರ ಮಾಡಿರುವುದರಿಂದ ಮತ್ತೊಮ್ಮೆ ಉಪನಿಬಂಧಕರ ಸಮಕ್ಷಮದಲ್ಲಿ ಸಭೆ ಮಾಡಬೇಕು, ಷೇರುದಾರರು ಎರಡು ವಾರ್ಷಿಕ ಸಭೆಗೆ ಗೈರಾದರೆ ಮತ್ತು ವಹಿವಾಟು ಮಾಡದಿದ್ದರೆ ಅವರನ್ನು ಅನರ್ಹ ಮಾಡುವುದನ್ನು ಕೈಬಿಡಬೇಕು, ಎಲ್ಲ ಷೇರುದಾರರಿಗೂ ಮತದಾನದ ಹಕ್ಕು ನೀಡಬೇಕು, ಬೇಡಿಕೆಗೆ ಅನುಗುಣವಾಗಿ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಮತದಾನಕ್ಕೆ ಅನರ್ಹರು ಎಂದು ನೀಡಿರುವ ನೋಟಿಸ್‌ಗಳನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಸಂಚಾಲಕಿ ಗಾಯತ್ರಿ, ಜಿಲ್ಲಾ ಸದಸ್ಯರಾದ ಬಲರಾಮಪ್ಪ, ಗೌರವಾಧ್ಯಕ್ಷ ವೆಂಕಟರೋಣಪ್ಪ, ತಾಲೂಕು ಉಪಾಧ್ಯಕ್ಷ ರವೀಂದ್ರರೆಡ್ಡಿ, ತಾಲೂಕು ಮಹಿಳಾ ಸಂಚಾಲಕಿ ವೆಂಕಟಲಕ್ಷ್ಮೀ ಸೇರಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ, ಮುಖಂಡರಾದ ಚೌಡರೆಡ್ಡಿ, ಗೋಪಿ, ಶಿವಪ್ಪ ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article

ಒಂದು ತಿಂಗಳು ಅನ್ನ ತಿನ್ನುವುದನ್ನು ಬಿಟ್ಟರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ… Rice

ದಕ್ಷಿಣ ಭಾರತೀಯರಿಗೆ ಅನ್ನ ( Rice ) ಇಲ್ಲದೆ ಯಾವುದೇ ಊಟ ಪೂರ್ಣವಾಗುವುದಿಲ್ಲ. ಅಂದರೆ, ತೃಪ್ತಿ…

ಮೊಸರಿಗೆ ಈರುಳ್ಳಿ ಸೇರಿಸಿ ತಿನ್ನಬಹುದೇ? ತಿಂದ್ರೆ ಏನಾಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ… Curd with Onions

ಮೊಸರಿಗೆ (Curd) ಈರುಳ್ಳಿ ( Onions ) ಸೇರಿಸಿ, ತಿನ್ನಲು ಅನೇಕರು ಇಷ್ಟಪಡುತ್ತಾರೆ. ಆದರೆ, ಆ…

ಪುರುಷರು ಕುಳಿತು or ನಿಂತುಕೊಂಡು ಮೂತ್ರ ವಿಸರ್ಜನೆ ಮಾಡ್ಬೇಕಾ? ಇಲ್ಲಿದೆ ಉಪಯುಕ್ತ ಮಾಹಿತಿ… Urinate Position

ಸಾಮಾನ್ಯವಾಗಿ ಪುರುಷರು ನಿಂತುಕೊಂಡೇ ಮೂತ್ರ ವಿಸರ್ಜನೆ ( Urinate Position ) ಮಾಡುತ್ತಾರೆ. ಆದರೆ, ಈ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ