ಬಿಗ್​ಬಾಸ್​ನಲ್ಲಿ ಈ ಭಾನುವಾರ ಔಟ್ ಆಗೋರು ಇವರೇ? ಕೊನೆಗೂ ಮುಗಿದೋಯ್ತಾ ಲಕ್ ಆಟ?

blank

ಬೆಂಗಳೂರು: ಬಿಗ್​ಬಾಸ್ ಸೀಸನ್ 8 ಫಿನಾಲೆ ಹಂತದ ಬಳಿ ಬಂದಿದೆ. ಈ ವಾರ ಡಬಲ್ ಎಲಿಮಿನೇಷನ್ ಮಾಡಿ, ಮುಂದಿನ ವಾರದ ಮಧ್ಯೆ ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕರೆದರೆ ಉಳಿದವರೆಲ್ಲರೂ ಫಿನಾಲೆ ಕಂಟೆಸ್ಟೆಂಟ್​ಗಳೇ ಆಗಿರುತ್ತಾರೆ. ಇಂದು ಶೂಭಾ ಪೂಂಜಾ ಮನೆಯಿಂದ ಹೊರಗೆ ಬರುವುದು ಖಚಿತವಾಗಿದ್ದು, ನಾಳೆ ಯಾರು ಹೊರ ಬರುತ್ತಾರೆ ಎನ್ನುವ ಬಗ್ಗೆಯೂ ಈಗಲೇ ಚರ್ಚೆ ಆರಂಭವಾಗಿದೆ.

ಶುಭಾ ಪೂಂಜಾ ಮನೆಯಿಂದ ಹೊರಬಂದರೆ ಮಂಜು ಪಾವಗಡ, ವೈಷ್ಣವಿ, ಅರವಿಂದ ಕೆಪಿ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಮತ್ತು ಶಮಂತ್ ಬ್ರೋ ಗೌಡ ಮನೆಯಲ್ಲಿ ಉಳಿಯುತ್ತಾರೆ. ಅದರಲ್ಲಿ ದಿವ್ಯಾ ಉರುಡುಗ ನಾಮಿನೇಟ್ ಆಗಿಲ್ಲವಾದ ಕಾರಣ ಅವರು ಸೇಫ್ ಆಗಿರುತ್ತಾರೆ. ಉಳಿದವರಲ್ಲಿ ಅತಿ ಕಡಿಮೆ ಅಭಿಮಾನಿಗಳಿರುವುದು ಶಮಂತ್ ಬ್ರೋ ಗೌಡನಿಗೆ ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ನಾಳೆ ಶಮಂತ್ ಬ್ರೋ ಗೌಡ ಮನೆಯಿಂದ ಹೊರಗೆ ಬರಬಹುದು ಎನ್ನಲಾಗಿದೆ. ಆತ ಮನೆಯಿಂದ ಹೊರಬಂದರೆ ಆರು ಜನರು ಉಳಿಯಲಿದ್ದು, ಅದರಲ್ಲಿ ಇನ್ನೊಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದ ಐದು ಜನರು ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ.

ಶಮಂತ್ ಬ್ರೋ ಗೌಡ ಬಿಗ್​ಬಾಸ್​ಗೆ ಬಂದಾಗಿನಿಂದಲೂ ಲಕ್​ ಮೇಲೇ ಉಳಿದುಕೊಂಡಿದ್ದಾರೆ ಎನ್ನುವ ಮಾತಿದೆ. ಮೊದಲ ಎರಡು ವಾರಗಳಲ್ಲಿ ಯಾರೊಂದಿಗೂ ಬೆರೆಯದ ಆತ ಕ್ಯಾಪ್ಟನ್ ಆಗಿದ್ದ ಕಾರಣಕ್ಕೆ ಬಚಾವಾಗಿದ್ದ. ನಂತರ ಎಲಿಮಿನೇಟ್ ಆದನಾದರೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದ ಕಂಟೆಸ್ಟೆಂಟ್ ಆಟ ಬಿಟ್ಟುಕೊಟ್ಟು ಮನೆಯಿಂದ ಹೊರಬರುತ್ತೇನೆ ಎಂದಿದ್ದಕ್ಕೆ ಸೇಫ್ ಆದ. ಹಾಗೆಯೇ ಇನ್ನೊಮ್ಮೆ ವೈನ್ ಸ್ಟೋರ್ ರಘು ಗೌಡ ಶಮಂತ್​ನನ್ನು ಸೇಫ್ ಮಾಡಿದ್ದ. ಈ ರೀತಿ ಅನೇಕ ಬಾರಿ ಎಲಿಮಿನೇಶನ್ ಕತ್ತಿಯಿಂದ ಆತ ಲಕ್​​ ಮೂಲಕ ಪಾರಾಗಿದ್ದು, ಈ ಬಾರಿ ಆ ಲಕ್ ಕೈ ಕೊಡುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. (ಏಜೆನ್ಸೀಸ್)

ಇದೇನು ಬಾಯೋ ಬೊಂಬಾಯೋ?! ವಿಶ್ವದ ಅತ್ಯಂತ ದೊಡ್ಡ ಬಾಯಿ ಇರುವ ಮಹಿಳೆ ಇವಳು..

ಭಗತ್ ಸಿಂಗ್​ನಂತೆ ನಟಿಸಲು ಹೋಗಿ ಸಾವನ್ನಪ್ಪಿದ ಬಾಲಕ! ಮನಕಲಕುವ ಘಟನೆಯಿದು

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಚೀಸ್​​ ನೂಡಲ್ಸ್​​; ಇಲ್ಲಿದೆ ಸಿಂಪಲ್​ ವಿಧಾನ | Recipe

ಫ್ಯಾಮಿಲಿ ಜತೆ ಹೋಟೆಲ್​ಗೆ ಹೋದರೆ ಫ್ರೈಡ್​ರೈಸ್​​, ನೂಡಲ್ಸ್​​, ಗೋಬಿ ಹೀಗೆ ಚೈನೀಸ್​​​ ಫುಡ್ ಮೊದಲ ಆಯ್ಕೆಯಾಗಿರುತ್ತದೆ.…

ಈ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಬೀಟ್ರೂಟ್​ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…

ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…