ಶಕ್ತಿಕಾಂತ ದಾಸ್ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) 25ನೇ ಗವರ್ನರ್ ಆಗಿ ಬುಧವಾರ ಶಕ್ತಿಕಾಂತ ದಾಸ್ ಅಧಿಕಾರ ಸ್ವೀಕರಿಸಿದರು. ಆರ್​ಬಿಐ ಮೌಲ್ಯ ಮತ್ತು ಸ್ವಾಯತ್ತೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಶಕ್ತಿಕಾಂತ ದಾಸ್​ರನ್ನು ಆರ್​ಬಿಐ ಗವರ್ನರ್ ಆಗಿ ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಓದಿದ್ದು ಎಂಎ ಇತಿಹಾಸ : ಶಕ್ತಿಕಾಂತ ದಾಸ್ ತಮಿಳುನಾಡು ಕೇಡರ್​ನ 1980ರ ತಂಡದ ಐಎಎಸ್ ಅಧಿಕಾರಿ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಡಳಿತ ವಿಭಾಗದಲ್ಲಿ ಬಹುತೇಕ ವೃತ್ತಿ ಬದುಕನ್ನು ಕಳೆದಿದ್ದಾರೆ. ಅವರು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿಲ್ಲ. 2016ರ ನವೆಂಬರ್​ನಲ್ಲಿ 500 ಮತ್ತು 1 ಸಾವಿರ ರೂ. ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದಾಗ ಅವರು ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು. ಕಳೆದ ವರ್ಷ ಸೇವಾ ನಿವೃತ್ತಿ ಹೊಂದಿರುವ ಅವರು, ಈಗ ಆರ್​ಬಿಐ ಗವರ್ನರ್ ಆಗಿ ನೇಮಕ ಗೊಂಡಿರುವ ಬಗ್ಗೆ ಟ್ವಿಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಟೀಕಿಸಿದ್ದಾರೆ.