ವಿಜಯಪುರ: ಶೇಕ್ಸ್ಪೀಯರ್ರ ಸಾಹಿತ್ಯ ಮತ್ತು ಸಂಸತಿ ಮೇಲೆ ಶಾಶ್ವತ ಪ್ರಭಾವ ಬೀರುತ್ತವೆ. ಅವುಗಳಲ್ಲಿ ಮಾನವ ಸ್ವಭಾವದ ಭವ್ಯತೆ ಮತ್ತು ಕತ್ತಲೆ ಎರಡನ್ನೂ ಪ್ರದರ್ಶಿಸುತ್ತವೆ ಎಂದು ಪ್ರಸಿದ್ಧ ಇಂಗ್ಲಿಷ್ ನಿವೃತ್ತ ಪ್ರಾಧ್ಯಾಪಕ, ಬರಹಗಾರ ಡಾ. ಆರ್.ಕೆ. ಕುಲಕರ್ಣಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ “ಶೇಕ್ಸ್ಪೀಯರ್ ಮತ್ತು ಅವರ ದುರಂತಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಶೇಕ್ಸ್ ಪೀಯರ್ ಮಹಾನ್ ನಾಟಕಕಾರ. ಶೇಕ್ಸಪಿಯರ್ ದುರಂತಗಳು ಮಾನವನ ಸ್ಥಿತಿ, ವಿಧಿ ಮತ್ತು ಮಹತ್ವಾಕಾಂಕ್ಷೆಯ ಬಲವಾದ ನಿರೂಪಣೆಗಳ ಮೂಲಕ ಅನ್ವೇಷಿಸುತ್ತವೆ. ಹ್ಯಾಮ್ಲೆಟ್, ಒಥೆಲ್ಲೋ, ಕಿಂಗ್ ಲಿಯರ್ ಮತ್ತು ಮ್ಯಾಕ್ಬೆತ್ನಂತಹ ಅವರ ನಾಟಕಗಳು ಸೇಡು, ದ್ರೋಹ ಮತ್ತು ಅಧಿಕಾರದ ಭ್ರಷ್ಟ ಪ್ರಭಾವದ ಷಯಗಳನ್ನು ಪರಿಶೀಲಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾಯೆರ್ ಡಾ. ಆರ್.ಎಂ. ಮಿರ್ದೆ ಶೇಕ್ಸ್ಪೀಯರ್ ಅವರನ್ನು ದೇವರ ದೃಷ್ಟಿ ಹೊಂದಿರುವವರು ಎಂದು ಬಣ್ಣಿಸಿ, ಅವರು ನಮ್ಮಲ್ಲಿ ಆಯ್ಕೆ ಮಾಡಿದ ಎಲ್ಲ ಪಾತ್ರಗಳಿಗೆ ಸಮರ್ಥನೆ ನೀಡಿದರು. ಶೇಕ್ಸ್ಪೀಯರ್ ಪ್ರೇಕರನ್ನು ಪ್ರೇರೇಪಿಸುವ, ಸವಾಲು ಮಾಡುವ ಮತ್ತು ಆಕರ್ಷಿಸುವ ಕೃತಿ ರಚಿಸಿದ್ದಾರೆ ಎಂದು ತಿಳಿಸಿದರು.
ವಿದ್ಯಾ ಪಾಟೀಲ ಸ್ವಾಗತಿಸಿದರು. ಶ್ವೇತಾ ಸವಣೂರ ನಿರೂಪಿಸಿದರು. ಪೂಜಾ ಮತು ಗೋದಾವರಿ ಉದ್ಘಾಟಿಸಿದರು. ಬಿಲಾಲ್ ಪಾಣಿಬಂದ್ ವಂದಿಸಿದರು.