More

  ಶಾರುಖ್​ ಮತ್ತು ದೀಪಿಕಾ ಜತೆಯಾದಾಗಲೆಲ್ಲ ಬಾಕ್ಸ್​ ಆಫೀಸ್​ ಉಡೀಸ್​!

  ಮುಂಬೈ: ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಪಠಾಣ್​’ ಚಿತ್ರ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸುತ್ತಿದೆ. ಮೊದಲ ಮೂರು ದಿನಗಳಲ್ಲಿ ಚಿತ್ರವು 160 ಕೋಟಿ ರೂ. ಸಂಪಾದಿಸಿದ್ದು, ಒಟ್ಟಾರೆ ಮೊದಲ ವಾರದಲ್ಲಿ ಚಿತ್ರ 200 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಹೇಳಲಾಗಿದೆ.

  ಇದನ್ನೂ ಓದಿ: ಒಂದು ‘ಲಾಂಗ್​ ಡ್ರೈವ್​’ಗೂ ಮೊದಲು ಮತ್ತು ಆ ನಂತರ …

  ಇದು ಬರೀ ಶಾರುಖ್​ ಖಾನ್​ ಒಬ್ಬರ ಜಯವಲ್ಲ. ದೀಪಿಕಾ ಪಡುಕೋಣೆ ಗೆಲುವು ಸಹ ಹೌದು. ಯಾವಾಗೆಲ್ಲ ಶಾರುಖ್ ಮತ್ತು ದೀಪಿಕಾ ಜತೆಯಾಗಿ ಕೆಲಸ ಮಾಡಿದ್ದಾರೋ, ಆ ಚಿತ್ರಗಳು ಹಿಟ್​ ಆಗಿರುವುದಷ್ಟೇ ಅಲ್ಲ, ಬಾಕ್ಸ್​ ಆಫೀಸ್​ನಲ್ಲಿ ಚೆನ್ನಾಗಿ ಹಣ ಮಾಡಿದೆ.

  ಅಂದ ಹಾಗೆ, ಇದು ಶಾರುಖ್​ ಮತ್ತು ದೀಪಿಕಾ ಅಭಿನಯದ ನಾಲ್ಕನೆಯ ಇದು. ಹಾಗೆ ನೋಡಿದರೆ, ದೀಪಿಕಾ ಅವರನ್ನು ಬಾಲಿವುಡ್​ಗೆ ಪರಿಚಯಿಸಿದ್ದೇ ಶಾರುಖ್​ ಖಾನ್​. ತಮ್ಮ ‘ಓಂ ಶಾಂತಿ ಓಂ’ ಚಿತ್ರದಲ್ಲಿ ದೀಪಿಕಾ ಅವರನ್ನು ಪರಿಚಯಿಸಿದ್ದು, ಆ ಚಿತ್ರದ ನಿರ್ಮಾಪಕರೂ ಆದ ಶಾರುಖ್​. ಆ ಚಿತ್ರವು ಮೊದಲ ದಿನವೇ 5.53 ಕೋಟಿ ರೂ ಸಂಪಾದಿಸುವುದರ ಜತೆಗೆ ಮೊದಲ ವಾರ 21.47 ಕೋಟಿ ರೂ ಸಂಪಾದಿಸಿತ್ತಂತೆ.

  ಆ ನಂತರ, ಅವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ‘ಚೆನ್ನೈ ಎಕ್ಸ್​ಪ್ರೆಸ್​’ ಚಿತ್ರದಲ್ಲಿ. ಈ ಚಿತ್ರದ ಮೊದಲ ದಿನದ ಕಲೆಕ್ಷನ್​ 33.12 ಕೋಟಿ ರೂ. ಆಗಿದ್ದು, ವಾರಾಂತ್ಯ 100.42 ಕೋಟಿ ರೂ ಗಳಿಕೆ ಮಾಡಿತ್ತಂತೆ. ಅದಾಗಿ ಒಂದು ವರ್ಷಕ್ಕೆ ಇಬ್ಬರೂ ‘ಹ್ಯಾಪಿ ನ್ಯೂ ಇಯರ್​’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರವು ಮೊದಲ ದಿನ 44.97 ಕೋಟಿ ರೂ. ಗಳಿಕೆ ಮಾಡಿದೆ. ಈಗ ‘ಪಠಾಣ್​’ ಚಿತ್ರವು ಆ ಎಲ್ಲ ಹಿಂದಿನ ದಾಖಲೆಗಳನ್ನು ಮುರಿದಿದೆ.

  ಇದನ್ನೂ ಓದಿ: ‘ಡ್ಯಾಶ್​’ ಹಾಡಿಗೆ ಕೋಟಿ ವೀಕ್ಷಣೆ … ಖುಷಿಯಾದರು ಚಂದನ್​, ಸಂಜನಾ

  ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

  2 ದಿನಗಳಲ್ಲಿ 127 ಕೋಟಿ ಗಳಿಕೆ; ಹಳೆಯ ದಾಖಲೆಗಳನ್ನೆಲ್ಲ ಮುರಿದ ‘ಪಠಾಣ್’​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts