ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಯಾದಗಿರಿ: ರಾಜ್ಯದಲ್ಲಿನ ಬಹುಸಂಖ್ಯಾತ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಮತ್ತು ಕೇಂದ್ರ ಸಕರ್ಾರ ನಿರ್ಲಕಿ್ಷೃಸುತ್ತಿದೆ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆರೋಪಿಸಿದರು.

ಸಮಾಜದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಲಿ ಸಮಾಜದ ಧೀಮಂತ ನಾಯಕ ದಿ.ವಿಠ್ಠಲ್ ಹೇರೂರ ಅವರ 5ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೇರೂರು ಅವರ ಕನಸುಗಳನ್ನು ಯಾರೊಬ್ಬರೂ ನನಸಾಗಿಲು ಪ್ರಯತ್ನಿಸುತ್ತಿಲ್ಲ. 224 ಜನ ಶಾಸಕರು ಮತ್ತು 28 ಸಂಸದರುಗಳಿದ್ದರೂ ಒಬ್ಬರೂ ಸಹ ಕೇಂದ್ರದಲ್ಲಿ ರಾಜ್ಯದಲ್ಲಿ ಧ್ವನಿ ಎತ್ತದೆ ಇರುವುದು ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಠ್ಠಲ್ ಹೇರೂರ ಅವರು ತಮ್ಮ ಜೀವಿತದ ಕೊನೆ ಕ್ಷಣದವರೆಗೂ ಸಮಾಜದ ಬಗ್ಗೆ ಚಿಂತಿಸದ ಚೇತನರಾಗಿದ್ದಾರೆ. ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸಬೇಕು ಎಂಬ ಅವರ ಕನಸನ್ನು ಸಮಾಜದ ಜನತೆ ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ಸಕರ್ಾರದ ಕಣ್ತೆರೆಸಬೆಕಾಗಿದೆ ಎಂದು ಹೇಳಿದರು.

ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕರಗಳು ಈ ಬಗ್ಗೆ ಗಂಭೀರವಾಗಿ ಚಚರ್ಿಸಿ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದು, ರಾಜಧಾನಿ ಎಕ್ಸಪ್ರೆಸ್ಗೆ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಮಾಜದ ಸಿದ್ದಪ್ಪ, ಸಾಯಿಬಣ್ಣ, ಗುರುರಾಜ, ಮಲ್ಲಿಕಾಜರ್ುನ, ಚೆನ್ನಪ್ಪ, ಸಾಬಣ್ಣ, ಶರಣಪ್ಪ, ಲಕ್ಷ್ಮಿರೆಡ್ಡಿ, ಆನಂದ, ಮಹಾದೇವಪ್ಪ, ಭೀಮಶೇಪ್ಪ, ಮಲ್ಲಪ್ಪ, ಮಹಾದೇವ, ಆನಂದ, ಯಲ್ಲಪ್ಪ, ಪ್ರಭು, ಶರಣಪ್ಪ, ಜಗದೀಶ, ಮಹೇಶ, ಮಲ್ಲಣ್ಣ, ನಟರಾಜ, ವೆಂಕಟೇಶ ಇನ್ನಿತರರು ಇದ್ದರು.