ಮಾಜಿ ಕ್ರಿಕೆಟಿಗ ಅಫ್ರಿದಿ ಹೇಳೋದು ಸರಿ, ಕಾಶ್ಮೀರ ಎಂದೆಂದೂ ಭಾರತದ ಭಾಗ: ರಾಜನಾಥ್​ ಸಿಂಗ್

ನವದೆಹಲಿ: ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಗೃಹ ಸಚಿವ ರಾಜನಾಥ್​ ಸಿಂಗ್​ ಒಪ್ಪಿಗೆ ಸೂಚಿಸಿದ್ದಾರೆ.

ರಾಯ್​ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಫ್ರಿದಿ ಹೇಳಿರುವುದು ಸರಿ. ಅವರಿಗೆ ಪಾಕಿಸ್ತಾನವನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಇನ್ನು ಕಾಶ್ಮೀರವನ್ನು ಹೇಗೆ ನೋಡಿಕೊಳ್ಳುತ್ತಾರೆ. ಕಾಶ್ಮೀರ ಇಂದಿಗೂ ಮುಂದಿಗೂ ಭಾರತದ ಭಾಗವಾಗಿರುತ್ತದೆ ಎಂದರು.

ನನ್ನನ್ನು ಕೇಳುವುದಾದರೆ ಕಾಶ್ಮೀರ ಪಾಕಿಸ್ತಾನಕ್ಕೆ ಬೇಡ. ಅದನ್ನು ಭಾರತಕ್ಕೂ ನೀಡಬೇಡಿ. ಕಾಶ್ಮೀರ ಒಂದು ಸ್ವತಂತ್ರ ದೇಶವಾಗಬೇಕು. ಆ ಮೂಲಕ ಮಾನವೀಯತೆ ಉಳಿಯಬೇಕು. ಕಾಶ್ಮೀರದಲ್ಲಿ ಜನರು ಸಾಯಬಾರದು. ಕಾಶ್ಮೀರದಲ್ಲಿ ಜನರು ಸಾಯುತ್ತಿರುವುದನ್ನು ನೋಡಿದಾಗ ನನಗೆ ಅತೀವ ದುಃಖವಾಗುತ್ತದೆ. ಯಾವುದೇ ಸಮುದಾಯದವರು ಮೃತಪಟ್ಟರೂ ಅದು ನನಗೆ ನೋವಿನ ಸಂಗತಿಯೇ ಎಂದು ಅಫ್ರಿದಿ ಲಂಡನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು. (ಏಜೆನ್ಸೀಸ್)

 

ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲಾಗದ ಪಾಕ್‌ಗೆ ಕಾಶ್ಮೀರ ಯಾಕೆ: ಅಫ್ರಿದಿ