ಶಹಾಬಾದ್: ದೈಹಿಕವಾಗಿ ಸದೃಢ, ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರಿಗೆ ಕ್ರೀಡೆ ಅವಶ್ಯಕ ಎಂದು ತಹಸೀಲ್ದಾರ್ ಜಗದೀಶ ಚೌರ ಹೇಳಿದರು.
ನಗರದ ಬಾಲ ವಿದ್ಯಾ ಮಂದಿರ ಶಾಲೆ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಶಹಾಬಾದ್ ವಲಯ ಪ್ರೌಢ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಸೋಲು, ಗೆಲುವು ಮುಖ್ಯವಲ್ಲ ಎಂದು ಹೇಳಿದರು.
ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಎಚ್.ವೈ.ರೆಡ್ಡಿ, ಬಸವರಾಜ ಬಳುಂಡಗಿ, ಶಿವಶರಣಪ್ಪ ಮಂಠಾಳ, ಡಾ.ಚಿದಾನಂದ ಕುಡ್ಡನ್, ಗಂಗಾಧರ, ಚನ್ನಬಸಪ್ಪ ಕೊಲ್ಲೂರ, ಪ್ರವೀಣ ಹೇರೂರ, ಈರಣ್ಣ ಕೆಂಬಾವಿ, ವಿಜಯಲಕ್ಷಿö್ಮÃ ಪಾಟೀಲ್, ಸಂತೋಷ ಸಲಗರ, ಶಿವಪುತ್ರ ಕರಣಿಕ, ಅಪ್ಪಾರಾವ ಮಾಲಿ ಪಾಟೀಲ್ ಇತರರಿದ್ದರು.
ಕ್ರೀಡಾ ಪಟುಗಳಿಂದ ಪರೇಡ್ ನಡೆಯಿತು. 29 ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು. ಬನ್ನಪ್ಪ ಸೈದಾಪುರ ನಿರೂಪಣೆ ಮಾಡಿದರು. ಚನ್ನಬಸಪ್ಪ ಕೊಲ್ಲೂರ ಪ್ರಾಸ್ತಾವಿಕ ಮಾತನಾಡಿದರು.