ಶಹಾಬಾದ್: ಸಂಸಾರ ಸಾಗರದಿಂದ ಪಾರಾಗಿ ಮೋಕ್ಷಮಾರ್ಗದಲ್ಲಿ ಸಾಗಲು ಪ್ರತಿ ಕ್ಷಣ ಹರಿ ನಾಮಸ್ಮರಣೆ, ಭಜನೆಯಿಂದ ಸರಳವಾಗಿ ಮೋಕ್ಷ ಪಡೆಯಲು ಸಾಧ್ಯ ಎಂದು ಹರಿಕೀರ್ತನಕಾರ ಬೆಳಗಾವಿಯ ದಿಗಂಬರ ಖೋತ ಹೇಳಿದರು.
ನಗರದ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಹರಿ ಕೀರ್ತನೆಯಲ್ಲಿ ಮಾತನಾಡಿ, ಸಂತ ತುಕಾರಾಮ, ಜ್ಞಾನದೇವ, ಸೋಪಾನಾಥರು ಪಾಂಡುರAಗನ ಸ್ಮರಣೆ ಮಾಡುತ್ತಲೇ ಸಂಸಾರದ ಗೊಡವೆಗಳಿಂದ ಪಾರಾಗಲು ದೈನಂದಿನ ಕಾಯಕದೊಂದಿಗೆ ಮೋಕ್ಷಜ್ಞಾನ ಪಡೆದಿದ್ದರು. ಅವರು ಸಾಧಿಸಿದ ಜ್ಞಾನ ಪಾಲಿಸಿ ಮುಕ್ತಿ ಪಡೆಯಬೇಕು ಎಂದರು.
ಹರಿಕೀರ್ತನೆಗೆ ರಾಜು ನಾಯ್ಕೋಡಿ, ವಿಜಯಕುಮಾರ ಜವಳೆ ತಾಳ, ಯಶ ಮಾಜ್ರೇಕರ್ ಮೃದಂಗದ ಸಾಥ್ ನೀಡಿದರು.
ಬೆಳಗ್ಗೆ ವಿಠ್ಠಲ ರುಕ್ಮೀಣಿ ದೇವರಿಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ನೆರವೇರಿತು. ಅಖಂಡ ವೀಣಾ ವಾದನ ಸೇವೆ ಪ್ರಾರಂಭಿಸಲಾಯಿತು. ದೇವಸ್ಥಾನ ಸಮಿತಿಯ ಬಸವರಾಜ ಸಾತ್ಯಾಳ, ರಾಮು ಕುಸಾಳೆ, ನಾಗನಾಥ ಯಾದವ, ಕಲ್ಯಾಣ ಜವಳೆ, ಮಹೇಶ ಪ್ಯಾರಸಾಬಾದಿ, ಬಾಬಾಸಾಹೇಬ ಸಾಳುಂಕೆ, ಸಚಿನ ಹಂಚಾಟೆ, ದೇವಕುಮಾರ ಇದ್ದರು.