ಕೊಲ್ಕತಾ; ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಮಾರ್ಚ್ 22ರಂದು ಕೊಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಯಿತು. ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್(Shah Rukh Khan) ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸದ್ಯ ಶಾರೂಖ್ ಖಾನ್ ಅವರು ರಾಷ್ಟ್ರಗೀತೆ ಹಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರ ಮುದ್ದಾದ ಗೆಸ್ಚರ್‌ಗೆ ಅಭಿಮಾನಿಗಳು ಸಂತೋಷದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಅಭಿಮಾನಿಯೊಬ್ಬರು ಶಾರೂಖ್ ಖಾನ್ ಅವರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಗೀತೆ ನುಡಿಸಲು ಪ್ರಾರಂಭಿಸಿದ ತಕ್ಷಣ, ಕಾರ್ಯಕ್ರಮ ಆರಂಭವಾದಗಿನಿಂದ ಧರಿಸಿದ್ದ ಕನ್ನಡಕವನ್ನು ತೆಗೆದು ಶಾರೂಖ್ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದರು. ಒಂದು ಫೋಟೋದಲ್ಲಿ ಅವರು ಕಣ್ಣು ಮುಚ್ಚಿರುವುದುನ್ನು ನೋಡಬಹುದು.
INDIA’s 🇮🇳 biggest icon 💜
BHARAT KI SHAAN SHAH RUKH KHAN 🫡 #IPL2025 @iamsrk @KKRiders #ShahRukhKhan #KolkataKnightRiders #AmiKKR #Pathaan #KKRvRCB
— ♡♔SRKCFC♔♡™ (@SRKCHENNAIFC) March 22, 2025
ಅವರ ಈ ಗೆಸ್ಚರ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಅಚಲ ಬೆಂಬಲಕ್ಕಾಗಿ ಧನ್ಯವಾದ ಹೇಳಲು ಶಾರೂಖ್ ಖಾನ್ ವೇದಿಕೆಯ ಮೇಲೆ ಬಂದರು. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ತಾರಾ ಬಳಗವನ್ನು ಪರಿಚಯಿಸಿದರು. ಶ್ರೇಯಾ ಘೋಷಾಲ್ ಸುಮಧುರವಾಗಿ ಹಾಡಿದರು, ನಂತರ ದಿಶಾ ಪಟಾನಿ ಮತ್ತು ಕರಣ್ ಔಜ್ಲಾ ಹಾಡಿದರು.(ಏಜೆನ್ಸೀಸ್)