ಬಿಟೌನ್​ ಬಾದ್​ಷಾ ಸಿಗ್ನೇಚರ್​​ ಪೋಸ್​​ ಫುಲ್​​ ಫೇಮಸ್; ​ ಶಾರೂಖ್​ ಹೇಳಿದ್ದೇನು ಗೊತ್ತಾ?

ಮುಂಬೈ: ಬಾಲಿವುಡ್​ ಬಾದ್​ಷಾ ಶಾರೂಖ್​ ಖಾನ್​ ಅವರ ಸಿಗ್ನೇಚರ್​ ಪೋಸ್​ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶಾರೂಖ್​ ಅವರಿಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಎಂದು ಕರೆಯಲ್ಪಡುವ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಶಾರೂಖ್​​ ಅವರ ಸಿಗ್ನಚರ್​ ಪೋಸ್​ ಬಗ್ಗೆ ಕೇಳಲಾಯಿತು. ಅದಕ್ಕೆ ಕಿಂಗ್ ಖಾನ್​​ ತಮ್ಮ ಸ್ಟೈಲ್​ನ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: ಪ್ಯಾರಿಸ್​ ಒಲಿಂಪಿಕ್ಸ್​​ 2024; ಬ್ರೇಕಿಂಗ್​​​​ ವಿಭಾಗದಲ್ಲಿ ಹೈಲೈಟ್ ಆದ ‘ಇಂಡಿಯಾ’ ​​.. ಕಾರಣ ಹೀಗಿದೆ

ಶಾರೂಖ್​ ಖಾನ್​ಗೆ ಈ ಪೋಸ್ ಕೊಟ್ಟಿದ್ದು ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಸರೋಜ್ ಖಾನ್. 90 ರ ದಶಕದಲ್ಲಿ ಭಾರತೀಯ ಚಿತ್ರರಂಗದ ನಟರು ಒಂದು ವಿಷಯವನ್ನು ತಿಳಿದುಕೊಳ್ಳಬೇಕಾಗಿತ್ತು. ಚಿತ್ರದ ಶೂಟಿಂಗ್ ಸಮಯದಲ್ಲಿ ಡ್ಯಾನ್ಸ್ ಸ್ಟೆಪ್ ಮಾಡಲು ಸಾಧ್ಯವಾಗದೆ ತುಂಬಾ ಮುಜುಗರ ಅನುಭವಿಸಿದೆ. ಸರಿಯಾಗಿ ಮಾಡಲು ಇಡೀ ರಾತ್ರಿ ಡ್ಯಾನ್ಸ್ ಸ್ಟೆಪ್ ಅನ್ನು ಅಭ್ಯಾಸ ಮಾಡಿದೆ. ನನಗೆ ನೆನಪಿದೆ ಬೆಳಗ್ಗೆ ಸೆಟ್​ಗೆ ಬಂದಾಗ ಸರೋಜ್ ಜೀ ಅವರು ನೀವು ಅದನ್ನು ಮಾಡಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮ ತೋಳುಗಳನ್ನು ಚಾಚಿ ಎಂದು ಹೇಳಿದರು.

ಮತ್ತೊಂದು ಸಿನಿಮಾದ ಶೂಟಿಂಗ್ ವೇಳೆಯು ಡ್ಯಾನ್​ ಮಾಡಲು ಕಷ್ಟವಾದಗ ನೃತ್ಯ ಸಂಯೋಜಕರನ್ನು, ನಾವು ಅದನ್ನು ತೆಗೆದುಹಾಕಬಹುದೇ? ನಾನು ತೆರೆದ ತೋಳುಗಳೊಂದಿಗೆ ನಿಲ್ಲುತ್ತೇನೆ ಎಂದು ಕೇಳಿದೆ. ಅದಕ್ಕೆ aವರು ಅನುಮತಿ ನೀಡಿದರು. ನನ್ನ ತೋಳುಗಳನ್ನು ತುಂಬಾ ಚಾಚುತ್ತಿದ್ದೆ ಅದು ವಿಚಿತ್ರವಾಗಿ ಕಾಣುತಿತ್ತು. ಬಳಿಕ ಸ್ವಲ್ಪ ಸ್ಟೈಲಿಶ್​ ಆಗಿ ಮಾಡಲು ಆರಂಭಿಸಿದೆ ಎಂದು ಹೇಳಿದರು. ಇಷ್ಟು ವರ್ಷ ಪೋಸ್ ಗಳ ಹೆಸರಲ್ಲಿ ನಿಮ್ಮನ್ನೆಲ್ಲ ಮೂರ್ಖರನ್ನಾಗಿಸುತ್ತಿದ್ದೇನೆ ಎಂದು ಶಾರುಖ್ ಖಾನ್ ತಮಾಷೆಯಾಗಿ ಹೇಳಿದ್ದಾರೆ. ಅದೇ ಸಿಗ್ನೇಚರ್​ ಪೋಸ್​ ಅನ್ನು ಶಾರೂಖ್​ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ ವೇದಿಕೆ ಮೇಲು ಮಾಡಿದರು. (ಏಜೆನ್ಸೀಸ್​​)

ISI ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನ; ಕೋರ್ಟ್​​ ಮಾರ್ಷಲ್​​ಗೆ ಪಾಕ್​ ಸೇನೆ ಸಜ್ಜು.. ಕಾರಣವೇನು ಗೊತ್ತಾ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…