ಬಾಹುಬಲಿ ಪ್ರಭಾಸ್​​ ಹುಟ್ಟುಹಬ್ಬ ಸಂಭ್ರಮದಲ್ಲಿ ‘ಸಾಹೋ’ ಟೀಸರ್​ ಗಿಫ್ಟ್​!

ನವದೆಹಲಿ: ಟಾಲಿವುಡ್​ ಯಂಗ್​ ರೆಬೆಲ್​ ಸ್ಟಾರ್​ ಹಾಗೂ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮಂಗಳವಾರ​ 39ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಸಾಹೋ’ ಚಿತ್ರತಂಡ ಪ್ರಭಾಸ್​ ಅಭಿಮಾನಿಗಳಿಗೆ ಟೀಸರ್​ ಉಡುಗೊರೆಯನ್ನು ನೀಡಿದೆ.

ಅಬುದಾಬಿಯಲ್ಲಿ ನಡೆದ ಚಿತ್ರೀಕರಣದ ತುಣುಕುಗಳು ವಿಡಿಯೋದಲ್ಲಿದೆ. ಸಾಹೋ ಸಿನಿಮಾದ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಆಗಿದ್ದು, ಪ್ರಭಾಸ್​​ ಹುಟ್ಟುಹಬ್ಬದ ಶುಭಾಶಯಗಳನ್ನು ರವಾನಿಸಿದ್ದಾರೆ.

ಟೀಸರ್​ನಲ್ಲಿ ಕಾರ್ ರೇಸಿಂಗ್, ಆ್ಯಕ್ಷನ್ ದೃಶ್ಯಗಳೇ ಹೈಲೈಟ್ಸ್​ ಆಗಿದೆ. ಪ್ರಭಾಸ್​ ಸ್ಟೈಲ್ ಹಾಗೂ ನಟಿ ಶ್ರದ್ಧಾ ಕಪೂರ್​ ಲುಕ್​ ಅಭಿಮಾನಿಗಳನ್ನು ಸೆಳೆದಿದೆ. ಬಿಡುಗಡೆಯಾಗಿರುವ ಟೀಸರ್​​ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹಲ್ ಚಲ್ ಎಬ್ಬಿಸುತ್ತಿದೆ. ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಅವರ ಮೊದಲ ತೆಲಗು ಚಿತ್ರ ಇದಾಗಿದೆ. (ಏಜೆನ್ಸೀಸ್​)​