ಬೆಂಗಳೂರು: ಗಾಂಧಿ ಜಯಂತಿಯಂದೇ ಮಹಿಳಾ ಪಿಜಿಗೆ ನುಗ್ಗಿದ ಕಾಮುಕ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ರಾತ್ರೋ ರಾತ್ರಿ ಮಹಿಳಾ ಪಿಜಿಗೆ ನುಗ್ಗಿದ ಕಾಮುಕ, ಯುವತಿಯರ ಮೈ-ಕೈ ಸವರಿ ಲೈಂಗಿಕ ಕಿರುಕುಳ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿಯರು ದೂರು ನೀಡಿದ್ದಾರೆ. ಘಟನೆ ಬಗ್ಗೆ ಪಿಜಿ ಮಾಲೀಕನಿಗೆ ವಿವರಿಸಿದರೆ 24 ಗಂಟೆ ಸೆಕ್ಯುರಿಟಿ ನೀಡುವುದಕ್ಕೆ ಇದೇನು ಪೊಲೀಸ್ ಸ್ಟೇಷನ್ನಾ ಎಂದು ಬೇಜವಾಬ್ದಾರಿಯಾಗಿ ವರ್ತಿಸಿದ್ದಾನೆ.
ಪ್ರತಿ ಪಿ.ಜಿ.ಯಲ್ಲೂ ಸಿಸಿಟಿವಿ, ಖಾಸಗಿ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಒಂದು ನೋಂದಣಿ ಪುಸ್ತಕ ಇಡಲು ಸೂಚಿಸಲಾಗಿದ್ದು, ನಮ್ಮ ಪಿಜಿಯಲ್ಲಿ ಯಾರೂ ಪಾಲನೆ ಮಾಡುತ್ತಿಲ್ಲ. ಸರಿಯಾಗಿ ಮಾನಿಟರಿಂಗ್ ಮಾಡುತ್ತಿಲ್ಲ. ಹೋಟೆಲ್ಗಳಲ್ಲಾದರೂ ಭದ್ರತೆಯಿರುತ್ತೆ. ಆದರೆ ನಮ್ಮ ಪಿಜಿಯಲ್ಲಿ ಭದ್ರತೆಯಿಲ್ಲ ಎಂದು ಯುವತಿಯರು ದೂರಿದ್ದಾರೆ.
ಅನಧಿಕೃತವಾಗಿ ನಡೆಸುತ್ತಿದ್ದ ಪಿಜಿ…
ಪಿಜಿ ನಡೆಸಬೇಕಾದರೆ ಅದರದ್ದೇ ನಿಯಮಗಳನ್ನು ಪಾಲಿಸಬೇಕು. ಆದರೆ ಘಟನೆ ನಡೆದ ಪಿಜಿ ಮಾಲೀಕ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾನೆ. ಮಾಲೀಕ ದ್ವಾರಕರೆಡ್ಡಿ ಬೇಜಾವ್ದಾರಿಯಿಂದಲೇ ಈ ರೀತಿ ದೌರ್ಜನ್ಯ ನಡೆಯುತ್ತಿವೆ ಎಂದು ಯುವತಿಯರು ಅರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)