Friday, 16th November 2018  

Vijayavani

Breaking News

ವರದಿಗಾರನಿಗೂ ರಷ್ಯಾದಲ್ಲಿ ಹುಡುಗಿಯರಿಂದ ಕಿರುಕುಳ!

Thursday, 12.07.2018, 3:03 AM       No Comments

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್​ಬಾಲ್ ವರದಿ ಮಾಡುವ ಮಹಿಳಾ ವರದಿಗಾರ್ತಿಯರಿಗೆ ರಷ್ಯಾದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಸಾಲು ಸಾಲು ವರದಿಗಳು ಪ್ರಕಟವಾಗಿದ್ದವು. ರಷ್ಯಾದ ಪುಂಡರು, ವರದಿಗಾರ್ತಿಗೆ ಕಿಸ್ ಕೊಟ್ಟು ಓಡಿಹೋದ ಹಲವು ಪ್ರಕರಣಗಳು ನಡೆದಿದ್ದವು. ಆದರೆ, ಈಗ ರಷ್ಯಾದ ಹುಡುಗಿಯರಿಂದ ವರದಿಗಾರನಿಗೆ ಕಿರುಕುಳ ಉಂಟಾಗಿದೆ. ದಕ್ಷಿಣ ಕೊರಿಯಾದ ಕ್ರೀಡಾ ವರದಿಗಾರ ಸುದ್ದಿಯನ್ನು ಹೇಳುತ್ತಿದ್ದ ವೇಳೆ, ರಷ್ಯಾದ ಇಬ್ಬರು ಹುಡುಗಿಯರು ಬಂದು ಆತನಿಗೆ ಕಿಸ್ ನೀಡಿ ಓಡಿ ಹೋಗಿದ್ದಾರೆ. ಜೂನ್ 28 ರಂದು ಈ ಘಟನೆ ನಡೆದಿದೆ. ಟ್ವಿಟರ್​ನಲ್ಲಿ ಇದನ್ನು ಲೈಂಗಿಕ ಕಿರುಕುಳ ಎಂದು ಕರೆದಿದ್ದಕ್ಕೂ ವಿರೋಧ ವ್ಯಕ್ತವಾಗಿದೆ. ಹುಡುಗಿಯರು ಮುತ್ತುಕೊಟ್ಟಿದ್ದನ್ನು ವರದಿಗಾರ ನಗುತ್ತಾ ಸ್ವೀಕರಿಸಿದ್ದಾನೆ. ಅದನ್ನು ಕಿರುಕುಳ ಎಂದು ಹೇಳುವ ಅಗತ್ಯವಿಲ್ಲ ಎಂದಿದ್ದಾರೆ. ಕೊಲಂಬಿಯಾದ ಕ್ರೀಡಾ ವರದಿಗಾರ್ತಿ ಜೂಲಿಯತ್ ಗೊಂಜಾಲೆಜ್, ವರದಿ ಮಾಡುತ್ತಿದ್ದ ವೇಳೆ ರಷ್ಯಾದ ಹುಡುಗನೊಬ್ಬ ಮುತ್ತುಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಆತ ಗೊಂಜಾಲೆಜ್ ಬಳಿ ಕ್ಷಮೆಯನ್ನೂ ಕೇಳಿದ್ದ. ಆ ನಂತರವೂ ಅಂಥದ್ದೇ ಕೆಲ ಪ್ರಕರಣಗಳು ವರದಿಯಾಗಿದ್ದವು.

Leave a Reply

Your email address will not be published. Required fields are marked *

Back To Top