More

    ಬಾಲಿವುಡ್​ ಅಂಗಳದಲ್ಲಿ ವೇಶ್ಯಾವಾಟಿಕೆ ಪ್ರಕರಣ ಬಯಲು; ಫೈವ್​ ಸ್ಟಾರ್​ ಹೊಟೇಲ್​ನಲ್ಲಿ ನಟಿ ಅಮೃತಾ ಧನೋಹ, ರೂಪದರ್ಶಿ ರಿಚಾ ಸಿಂಗ್​ ಬಂಧನ

    ನವದೆಹಲಿ: ವೇಶ್ಯಾವಾಟಿಕೆಗೆ ಹುಡುಗಿಯರನ್ನು ಕರೆತರುತ್ತಿದ್ದರು ಎಂದು ನಟಿ, ಅರ್ಹನ್​ ಖಾನ್​ನ ಮಾಜಿ ಪ್ರೇಯಸಿ ಅಮೃತಾ ಧನೋಹ ಮತ್ತು ರೂಪದರ್ಶಿ ರಿಚಾ ಸಿಂಗ್​ ಅವರನ್ನು ಹೊಟೇಲ್​ನಲ್ಲಿ ಬಂಧಿಸಲಾಗಿದೆ.

    ಗೋರೆಗಾಂವ್​ನ ಫೈವ್​ ಸ್ಟಾರ್​ ಹೊಟೇಲ್​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಪೊಲೀಸರು ಗುರುವಾರ ರಾತ್ರಿ ಬಯಲಿಗೆಳೆದಿದ್ದಾರೆ. ಬಾಲಿವುಡ್​ ನಟಿ, ರೂಪದರ್ಶಿ ಅವರನ್ನು ಬಂಧಿಸಲಾಗಿದೆ.

    ಡಿಸಿಪಿ ಡಿ.ಎಸ್. ಸ್ವಾಮಿ ನೇತೃತ್ವದಲ್ಲಿ ನಡೆದ ಪೊಲೀಸರು ಗುರುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಈ ವೇಶ್ಯಾವಾಟಿಕೆ ಬಯಲಾಗಿದೆ.

    ಬಾಲಿವುಡ್​ ನಟಿ, ಬಿಗ್​ಬಾಸ್​ 13ನೇ ಸೀಸನ್​ನ ಸ್ಪರ್ಧಿ ಅಮೃತಾ ಧನೋಹ (32), ರೂಪದರ್ಶಿ ರಿಚಾ ಸಿಂಗ್​ ಅವರನ್ನು ವೇಶ್ಯಾವಾಟಿಕೆಗೆ ಹುಡುಗಿಯರನ್ನು ಪೂರೈಸುತ್ತಿದ್ದರು ಎಂಬ ಆರೋಪಿಸಿ ಬಂಧಿಸಲಾಗಿದೆ ಎಂದು ಸ್ವಾಮಿ ತಿಳಿಸಿದ್ದಾರೆ.

    ಕಾರ್ಯಾಚಾರಣೆಯ ಭಾಗವಾಗಿ ಕೆಲವರನ್ನು ಗ್ರಾಹಕರ ಸೋಗಿನಲ್ಲಿ ಹೊಟೇಲ್​ಗೆ ತೆರಳಿದರು. ನಂತರ ಅವರು ಹೊಟೇಲ್​ನಲ್ಲಿ ಪಿಂಪ್​ಗಳನ್ನು ಭೇಟಿಯಾಗಿದ್ದಾರೆ. ಇದೆಲ್ಲ ಪ್ಲಾನ್​ನಂತೆ ನಡೆದ ಮೇಲೆ ದಾಳಿ ನಡೆಸಲಾಯಿತು. ಪ್ರಕರಣದಲ್ಲಿ ಇಬ್ಬರು ಹುಡುಗಿಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

    ಪ್ರಕರಣವೂ ದಿಂಡೋಷಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts