ರಾಜ್ಯದಲ್ಲಿ ಹಲವೆಡೆ ಧಾರಾಕಾರ ಮಳೆ: ಸಿಡಿಲು ಬಡಿದು ಇಬ್ಬರು ಸಾವು

ವಿಜಯಪುರ: ರಾಜ್ಯದಲ್ಲಿ ಹಲವೆಡೆ ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಯಲ್ಲಪ್ಪ ಮಾಲಗಾರ(48) ಮರಕ್ಕೆ ಕಟ್ಟಿದ್ದ ಆಕಳನ್ನು ಬಿಚ್ಚುವಾಗ ಸಿಡಿಲು ಬಡಿದು ಸಾವಿಗೆ ಶರಣಾಗಿದ್ದಾರೆ. ಈ ಪ್ರಕರಣ ತಿಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲುಗಳಿಂದ ರಸ್ತೆಗಳು ಬಿಳಿಬಿಳಿಯಾಗಿ ಕಾಣುತ್ತಿವೆ. ಬೆಳಗಾವಿಯಲ್ಲಿಯೂ ಆಲಿಕಲ್ಲು ಸಹಿತ ವರುಣನ ಅಬ್ಬರವಾಗಿದ್ದು, ಏಕಾಏಕಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. (ದಿಗ್ವಿಜಯ ನ್ಯೂಸ್​)