More

  ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ; ಕನಿಷ್ಠ 12 ಸಾವು, 11 ಮಂದಿಗೆ ಗಾಯ

  ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟವಾಗಿದ್ದು ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಲ್ಲದೆ, 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಮೋರಿಯೊಂದರ ಅಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಅದರ ಮೇಲೆ ಇದ್ದ ಬ್ಯಾಂಕ್​ ಕಟ್ಟಡವೊಂದಕ್ಕೆ ಭಾರಿ ಹಾನಿ ಉಂಟಾಗಿದೆ.

  ಕರಾಚಿಯ ಶೇರ್​ಷಹಾ ಪ್ರದೇಶದ ಕಟ್ಟಡದ ಅಡಿಭಾಗದಲ್ಲಿದ್ದ ಮೋರಿಯೊಳಗೆ ತುಂಬಿಕೊಂಡಿದ್ದ ಅನಿಲದಿಂದ ಈ ಸ್ಫೋಟ ಸಂಭವಿಸಿದೆ ಎಂದು ಬಾಂಬ್ ನಿಷ್ಕ್ರಿಯ ದಳದವರು ಅಂದಾಜಿಸಿದ್ದಾರೆ. ಅಷ್ಟಕ್ಕೂ ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ಬಹಿರಂಗಗೊಂಡಿಲ್ಲ.

  ಇದನ್ನೂ ಓದಿ: ಸಿಖ್ಖರ ಪವಿತ್ರ ಕ್ಷೇತ್ರಕ್ಕೆ ನುಗ್ಗಿ ಅಪಚಾರಕ್ಕೆ ಯತ್ನಿಸಿದವ ಹೆಣವಾಗಿ ಹೋದ!

  ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದೂ ಹೇಳಲಾಗುತ್ತಿದೆ. ಸಾವು ನೋವಿಗೆ ಒಳಗಾದವರಲ್ಲಿ ಬಹುತೇಕರು ಸ್ಫೋಟದಿಂದ ಹಾನಿಗೀಡಾಗಿರುವ ಕಟ್ಟಡದಲ್ಲಿ ಖಾಸಗಿ ಬ್ಯಾಂಕ್ ಕಚೇರಿಯ ಸಿಬ್ಬಂದಿ ಹಾಗೂ ಗ್ರಾಹಕರು ಎನ್ನಲಾಗಿದೆ. –ಏಜೆನ್ಸೀಸ್

  ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

  ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!

  ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts