ಬೆಳಗಾವಿ: ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ರಾಷ್ಟ್ರೀಯ ಐಪಿ ಯಾತ್ರಾ- 2024 ಶನಿವಾರ ಜರುಗಿತು.
ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮಿಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌ಗಳು) ಕುರಿತಂತೆ ಜಾಗೃತಿ ಮೂಡಿಸಲು ವೇದಿಕೆಯಾಯಿತು.
ಬಿಎಫ್‌ಸಿ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಸಚಿನ್ ಸಬ್ನಿಸ್, ಬೆಳಗಾವಿ ಡಿಐಸಿ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಎಚ್‌ಬಿಡಿ ಕ್ಲಸ್ಟರ್ ಮುಖ್ಯಸ್ಥ ಕಿರಣ ಕುಲಕರ್ಣಿ, ವೆಂಕಟೇಶ್ ಅವರಿಂದ ಕ್ರಿಯಾತ್ಮಕ ಚರ್ಚೆಗಳು ನಡೆದವು.
ಎಂಎಸ್‌ಎಂಇ ವಲಯದಲ್ಲಿ ನಾವೀನ್ಯತೆಯ ಸಂಸ್ಕೃತಿ ಬೆಳೆಸುವ ಅಗತ್ಯತೆ ಇದೆ ಎಂದು ಪ್ರಾಚಾರ್ಯ ಡಾ.ಎಸ್.ಎಫ್.ಪಾಟೀಲ ತಿಳಿಸಿದರು. ನಿರ್ದೇಶಕ ಶಿವಯೋಗಿ ತುರುಮುರಿ ಅವರು ಕೆಎಲ್‌ಇ ಟೆಕ್ ಪರಿಸರ ವ್ಯವಸ್ಥೆಯಲ್ಲಿ ಸಹಯೋಗದ ಪ್ರಾಮುಖ್ಯತೆ, ಎಂಎಸ್‌ಎಂಇ ಧನಸಹಾಯ ಬಗ್ಗೆ ತಿಳಿಸಿದರು.
ಎಂಎಸ್‌ಎಂಇ ಬೌದ್ಧಿಕ ಆಸ್ತಿ ಫೆಸಿಲಿಟೇಶನ್ ಸೆಂಟರ್, ಎಂಎಸ್‌ಎಂಇ ಹುಬ್ಬಳ್ಳಿ ಡಿಎಫ್‌ಒ ಮತ್ತು ಬೆಳಗಾವಿ ಡಿಐಸಿ ಸಹಯೋಗದೊಂದಿಗೆ ಇವೆಂಟ್ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಜಾಗತಿಕ ನಾವೀನ್ಯತೆಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ಇರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ಡಾ.ಅರುಣ ತಿಗಡಿ ಸ್ವಾಗತಿಸಿದರು. ಹರೀಶ್ ಅಗಡಿ ವಂದಿಸಿದರು.