ಜೆಟ್ ಏರ್​ವೇಸ್​ನಲ್ಲಿ ಸರಣಿ ರಾಜೀನಾಮೆ

ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದಾಗಿ ಹಾರಾಟ ನಿಲ್ಲಿಸಿರುವ ಜೆಟ್ ಏರ್​ವೇಸ್​ನ ಮೂವರು ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಡೆಪ್ಯೂಟಿ ಸಿಇಒ ಮತ್ತು ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರ್​ವಾಲ್, ಹಿರಿಯ ಅಧಿಕಾರಿ ರಾಹುಲ್ ತನೆಜಾ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಸಂಸ್ಥೆಯಿಂದ ಹೊರ ಹೋಗಿದ್ದಾಗಿ ಇವರು ಹೇಳಿಕೊಂಡಿದ್ದಾರೆ.

ಎಥಿಹಾದ್ ಸಂಸ್ಥೆಯ ಹೂಡಿಕೆಯಿಂದ ಜೆಟ್ ಏರ್​ವೇಸ್ ಕಾರ್ಯ ಪುನಾರಂಭ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇವರು ಹುದ್ದೆ ತೊರೆದಿದ್ದಾರೆ ಎನ್ನಲಾಗುತ್ತಿದೆ. ಜೆಟ್ ಏರ್​ವೇಸ್ ಕಳೆದ ಏಪ್ರಿಲ್ 17ರಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸಿಬ್ಬಂದಿ ಸಹ ಬಾಕಿ ವೇತನಕ್ಕಾಗಿ ಆಗ್ರಹಿಸುತ್ತಿದ್ದಾರೆ.