ದಾಂಡೇಲಿ: ನಗರದ ಸಂಡೇ ಮಾರ್ಕೆಟ್ ಬಳಿಯ ನಾಲ್ಕು ಅಂಗಡಿಗಳಲ್ಲಿ ಗುರುವಾರ ನಸುಕಿನಲ್ಲಿ ಸರಣಿ ಕಳ್ಳತನ ನಡೆದಿದೆ.
ಸಂಡೇ ಮಾರ್ಕೆಟ್ ಹತ್ತಿರದ ಎಸ್.ಕೆ. ಏಜೆನ್ಸಿ ಚೌಗುಲಾ ಚಿಕನ್ ಸೆಂಟರ್, ಕರ್ನಾಟಕ ಎಗ್ ಸೆಂಟರ್ ಮತ್ತು ಇಂಡಿಯನ್ ಚಿಕನ್ ಸೆಂಟರಿಗೆ ಕಳ್ಳರು ನುಗ್ಗಿದ್ದಾರೆ. ಕರ್ನಾಟಕ ಎಗ್ ಸೆಂಟರ್ ನಿಂದ ನಗದು 12 ಸಾವಿರ ರೂ. ಮತ್ತು ಇಂಡಿಯನ್ ಚಿಕನ್ ಸೆಂಟರ್ನಿಂದ 7 ಸಾವಿರ ರೂ. ದೋಚಿದ್ದಾರೆ. ಚೌಗುಲಾ ಚಿಕನ್ ಸೆಂಟರ್ನ ಸಿಸಿ ಕ್ಯಾಮರಾವನ್ನು ಕಳ್ಳರು ಮುರಿದಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪಿಎಸ್ಐ ಐ.ಆರ್. ಗಡ್ಡೆಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.