ಸೀರಿಯಲ್ ಕಿಲ್ಲರ್ ಮಾಧುರಿ?: ‘ಮಿಸಸ್.ದೇಶಪಾಂಡೆ’ ವೆಬ್ ಸರಣಿಯಲ್ಲಿ ವಿಭಿನ್ನ ಪಾತ್ರ

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲಿಗಲ್ಲು ಸಾಧಿಸಿದವರು ನಟಿ ಮಾಧುರಿ ದೀಕ್ಷಿತ್. 40 ವರ್ಷಗಳ ಸಿನಿಜರ್ನಿಯಲ್ಲಿ ಸುಮಾರು 70ಕ್ಕೂ ಅಧಿಕ ಸಿನಿಮಾ, ಧಾರಾವಾಹಿ, ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡಿದ್ದ ‘ಮಜ ಮಾ’ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದ ಮಾಧುರಿ ದೀಕ್ಷಿತ್ ಬಳಿಕ ಒಟಿಟಿಗೂ ಎಂಟ್ರಿ ನೀಡಿದ್ದರು. 2022ರಲ್ಲಿ ಬಿಜಾಯ್ ನಂಬಿಯಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ದ ಫೇಮ್ ಗೇಮ್’ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಯಶಸ್ವಿಯಾದ ಬೆನ್ನೆಲ್ಲೆ, ಇದೀಗ ಮತ್ತೊಂದು ವೆಬ್‌ಸರಣಿಯಲ್ಲಿ ಮಾಧುರಿ ದೀಕ್ಷಿತ್ ನಟಿಸುತ್ತಿದ್ದಾರೆ. ‘ಮಿಸಸ್.ದೇಶಪಾಂಡೆ’ ಎಂಬ ಹೆಸರಿನ ವೆಬ್ ಸರಣಿಗೆ ಸಹಿ ಹಾಕಿದ್ದಾರೆ. ಇದೊಂದು ಸೈಕಾಲಜಿಕಲ್ ಥ್ರಿಲರ್ ಜಾನರ್‌ನ ಸರಣಿಯಾಗಿದ್ದು, ‘ಸಿಟಿ ಆಫ್​ ಡ್ರೀಮ್ಸ್’, ‘ಮಾಡರ್ನ್ ಲವ್ ಹೈದರಬಾದ್’ ಖ್ಯಾತಿಯ ನಾಗೇಶ್ ಕುಕನೂರು ನಿರ್ದೇಶಿಸುತ್ತಿದ್ದಾರೆ. ಇದು ಫ್ರೆಂಚ್ ವೆಬ್ ಸರಣಿ ರಿಮೇಕ್. ಸರಣಿ ಕಿಲ್ಲರ್‌ಗಳನ್ನು ಸೆರೆ ಹಿಡಿಯಲು ಪೊಲೀಸರು ಮತ್ತೊಂದು ಸರಣಿ ಕಿಲ್ಲರ್ ಗುಂಪುನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂದೆ ಹೇಗೆ ಅವರನ್ನು ಬಂಧಿಸುತ್ತಾರೆ ಎಂಬುದು ಕಥಾ ವಸ್ತು. ಇಲ್ಲಿ ಮಾಧುರಿ ದೀಕ್ಷಿತ್ ಸರಣಿ ಕಿಲ್ಲರ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ತಾರಾಬಳಗ ಸೇರಿ ಇತರ ಮಾಹಿತಿ ಹಂಚಿಕೊಳ್ಳಬೇಕಷ್ಟೇ. -ಏಜೆನ್ಸೀಸ್

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…