ಹೆಮ್ಮೆಯ ಅಮ್ಮನ ಮುದ್ದಿನ ಕುವರಿ ಇವಳೇ ನೋಡಿ!

ವಾಷಿಂಗ್ಟನ್‌: ಅಮೆರಿಕದ ಖ್ಯಾತ ಟಿನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಈಗ ಚೊಚ್ಚಲ ಮಗುವಿನ ತಾಯಿಯಾಗಿದ್ದು, ಎರಡು ವಾರಗಳ ನಂತರ ತನ್ನ ಮುದ್ದಿನ ಮಗಳನ್ನು ಆನ್‌ಲೈನ್‌ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾಳೆ. ಇನ್ಸ್​ಟಾಗ್ರಾಮ್​ನಲ್ಲಿ ತನ್ನ ನವಜಾತ ಮಗುವಿನ ಫೋಟೊವನ್ನು ಶೇರ್‌ ಮಾಡಿದ್ದಾರೆ ಟಿನಿಸ್‌ ತಾರೆ ಸೆರೆನಾ.

 

23 ಬಾರಿ ಗ್ರ್ಯಾಂಡ್‌ ಸ್ಲಾಮ್‌ನಲ್ಲಿ ಗೆದ್ದಿರುವ ಸೆರೆನಾ, ಅಲೆಕ್ಸಿಯಾ ಒಲಂಪಿಯಾ ಡೆಲಿವರಿ ಸಂದರ್ಭದಲ್ಲಿ ಎದುರಿಸಿದ ತೊಡಕುಗಳ ಬಗ್ಗೆ ಹೇಳಿಕೊಂಡಿದ್ದಾಳೆ. ಡೆಲಿವರಿ ವೇಳೆ ಹಲವು ತೊಂದರೆಗಳನ್ನು ಅನುಭವಿಸಿದರೂ ತುಂಬಾ ದಿನದ ನಂತರ ಮಗಳನ್ನು ಪಡೆದಿದ್ದೇವೆ ಎಂದು ಆಸ್ಪತ್ರೆಯಿಂದ ತನ್ನ ಗಂಡ ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಓಹಿಯನ್ ಜತೆ ತೆರಳುವಾಗ ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಾಗಿ ವಿಜಯವಾಣಿ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸೆಪ್ಟೆಂಬರ್‌ 1ರಂದು 6 ಪೌಂಡ್​, 14 ಔನ್ಸ್ ತೂಕದ ಮಗಳು ಜನ್ಮ ತಾಳಿದ್ದು, ಆನಂತರ ಒಂದು ವಾರ ಆಸ್ಪತ್ರೆಯಲ್ಲಿಯೇ ತಂಗಿದ್ದೆವು ಎಂದೂ ತಿಳಿಸಿದ್ದಾರೆ. ಇನ್ನು ಸೆರೆನಾ ಶೇರ್‌ ಮಾಡಿರುವ ವೀಡಿಯೋದಲ್ಲಿ ಈ ತಿಂಗಳ ಅಂತ್ಯಕ್ಕೆ 36 ವಾರ ಪೂರ್ಣಗೊಳ್ಳಲಿದ್ದು, ತನ್ನ ಪ್ರಗ್ನೆನ್ಸಿ ದಿನಗಳಿಂದ ತಮ್ಮ ಮಗಳು ಹುಟ್ಟಿದವರೆಗಿನ ಎಲ್ಲ ವಿಷಯಗಳೂ ಒಳಗೊಂಡಿವೆ.

ಈ ಮಧ್ಯೆ ಗಟ್ಟಿಗಿತ್ತಿ ಸೆರೆನಾ ವಿಲಿಯಮ್ಸ್‌ ಜನವರಿಯಲ್ಲಿಯೇ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ! ಸುದ್ದಿ ಸಂಸ್ಧೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಈ ಹಿಂದೆಯೇ ಹೇಳಿಕೊಂಡಿದ್ದರು.

ಮೂರು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಕ್ರೀಡೆಗೆ ಹಿಂದಿರುಗುತ್ತೇನೆ ಎಂದು ಹೇಳಿಕೊಂಡಿದ್ದರು. ಇನ್ನಷ್ಟು ಉತ್ಸುಕತೆಯಿಂದಲೇ ಅಂಗಳಕ್ಕೆ ಇಳಿಯಲಿದ್ದು, ಮಾಡು ಇಲ್ಲವೆ ಮಡಿ ಎನ್ನುವಂತೆ ಸಾಧ್ಯವಾದಷ್ಟೂ ವಿಜಯೀಯಾಗಿ ವಿಜೃಂಭಿಸುವುದಾಗಿ ಹೇಳಿದ್ದರು. (ಏಜೆನ್ಸೀಸ್‌)

 

Leave a Reply

Your email address will not be published. Required fields are marked *