ಐಪಿಎಲ್​ ಟೂರ್ನಿ ಮರುನಿಗದಿಗೆ ಸೆಪ್ಟೆಂಬರ್​ನಲ್ಲಿದೆ ಅತ್ಯುತ್ತಮ ಅವಕಾಶ!

blank

ಬೆಂಗಳೂರು: ಭಾರತ-ಪಾಕ್​ ಉದ್ವಿಗ್ನತೆ ಇನ್ನೊಂದು ವಾರದಲ್ಲೂ ತಣ್ಣಗಾಗದೆ ಐಪಿಎಲ್​ ಮತ್ತೆ ಮುಂದೂಡಿಕೆಯಾದರೆ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ಏಷ್ಯಾಕಪ್​ ಸಮಯದಲ್ಲಿ ಮರುನಿಗದಿಪಡಿಸುವ ಅವಕಾಶ ಬಿಸಿಸಿಐ ಮುಂದಿದೆ. ಹಾಲಿ ಸನ್ನಿವೇಶದಲ್ಲಿ ಭಾರತ-ಪಾಕ್​ ಒಳಗೊಂಡ ಏಷ್ಯಾಕಪ್​ ಟೂರ್ನಿ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಅದೇ ಸಮಯದಲ್ಲಿ ಐಪಿಎಲ್​ ಮರುನಿಗದಿಪಡಿಸುವುದು ಅತ್ಯುತ್ತಮ ಆಯ್ಕೆ ಎನಿಸಿದೆ.

blank

ಐಪಿಎಲ್​ನ ಉಳಿದ ಪಂದ್ಯಗಳ ಆಯೋಜನೆಗೆ 10ರಿಂದ 12 ದಿನ ಸಾಕಾಗುತ್ತದೆ. ಏಷ್ಯಾಕಪ್​ ಟೂರ್ನಿ ಆಯೋಜನೆಗೆ ಸೆಪ್ಟೆಂಬರ್​ನಲ್ಲಿ 19 ದಿನಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಭಾರತ ತಂಡ ಜೂನ್​-ಜುಲೈ ತಿಂಗಳ ಇಂಗ್ಲೆಂಡ್​ ಪ್ರವಾಸವನ್ನು ಪೂರ್ಣಗೊಳಿಸಿದ ಬಳಿಕ ಐಪಿಎಲ್​ ಮರುನಿಗದಿಗೆ ಅವಕಾಶವಿದೆ. ಆದರೆ ವಿದೇಶಿ ಆಟಗಾರರ ಲಭ್ಯತೆಯೊಂದೇ ಪ್ರಮುಖ ಸವಾಲು ಆಗಿರಲಿದೆ. ಆಗಸ್ಟ್​ನಲ್ಲಿ ನಿಗದಿಯಾಗಿರುವ ಭಾರತ ತಂಡದ ಬಾಂಗ್ಲಾದೇಶ ಪ್ರವಾಸವೂ ನಡೆಯುವುದು ಅನುಮಾನವೆನಿಸಿದೆ. ಆದರೆ ಆಗಸ್ಟ್​ 5ರಿಂದ 31ರವರೆಗೆ ಇಂಗ್ಲೆಂಡ್​ನ “ದಿ ಹಂಡ್ರೆಡ್​’ ಟೂರ್ನಿ ನಿಗದಿಯಾಗಿದ್ದು, ಐಪಿಎಲ್​ನಲ್ಲಿ ಆಡುವ ಹೆಚ್ಚಿನ ವಿದೇಶಿ ಆಟಗಾರರು ಅದರಲ್ಲಿ ಆಡುವುದರಿಂದ ಆಗಸ್ಟ್​ನಲ್ಲಿ ಐಪಿಎಲ್​ ಮರುನಿಗದಿ ಕಷ್ಟವೆನಿಸಿದೆ. ಇದಲ್ಲದೆ ಆಗಸ್ಟ್​ನಲ್ಲಿ ದ. ಆಫ್ರಿಕಾ-ಆಸ್ಟ್ರೆಲಿಯಾ ನಡುವೆ ವೈಟ್​ಬಾಲ್​ ಸರಣಿಯೂ ನಿಗದಿಯಾಗಿದೆ.

ಸೆಪ್ಟೆಂಬರ್​ 2ರಿಂದ 14ರವರೆಗೆ ಇಂಗ್ಲೆಂಡ್​-ದ. ಆಫ್ರಿಕಾ ಸರಣಿ ನಿಗದಿಯಾಗಿದ್ದರೂ, ಇವೆರಡು ರಾಷ್ಟ್ರಗಳ ಮಂಡಳಿ ಜತೆ ಬಿಸಿಸಿಐ ಉತ್ತಮ ಸಂಬಂಧ ಹೊಂದಿರುವುದರಿಂದ ಮತ್ತು ಇವೆರಡು ದೇಶಗಳ ಲೀಗ್​ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಹೂಡಿಕೆ ಇರುವುದರಿಂದ, ಈ ದೇಶಗಳ ಆಟಗಾರರು ಐಪಿಎಲ್​ಗೆ ಲಭ್ಯರಾಗುವುದನ್ನು ನಿರೀಕ್ಷಿಸಬಹುದು. ಕೆರಿಬಿಯನ್​ ಪ್ರೀಮಿಯರ್​ ಲೀಗ್​ ಕೂಡ ಸೆಪ್ಟೆಂಬರ್​ನಲ್ಲಿ ನಡೆಯಲಿದ್ದರೂ, ವೆಸ್ಟ್​ ಇಂಡೀಸ್​ನ ಆಯ್ದ ಕೆಲ ಆಟಗಾರರು ಐಪಿಎಲ್​ಗೆ ಲಭ್ಯರಾಗುವುದು ಕಷ್ಟವಾಗದು.

ಮಹಿಳೆಯರ ತ್ರಿಕೋನ ಏಕದಿನ ಸರಣಿ: ಫೈನಲ್​​ಗೇರಿದ ಭಾರತ ತಂಡ

TAGGED:
Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…