ಹಗರಿಬೊಮ್ಮನಹಳ್ಳಿ: ಮನೆಯಲ್ಲಿ ಒಣಕಸ ಮತ್ತು ಹಸಿಕಸ ಬೇರ್ಪಡಿಸಿ ಪುರಸಭೆಯಿಂದ ನೀಡಿದ ಬುಟ್ಟಿಯಲ್ಲಿ ಹಾಕಿ ಮುನ್ಸಿಪಾಲಿಟಿ ಗಾಡಿ ಬಂದಾಗ ಪ್ರತ್ಯೇಕವಾಗಿ ನೀಡಿ ಎಂದು ಪುರಸಭೆ ಸದಸ್ಯೆ ಮಂಜುಳ ಕೃಷ್ಣನಾಯ್ಕ ಹೇಳಿದರು.
ಇದನ್ನೂ ಓದಿ: ಸ್ವಚ್ಛತೆಗಾಗಿ ಹಸಿಕಸ-ಒಣಕಸ ಬೇರ್ಪಡಿಸಿ
ಪಟ್ಟಣದ ಹಳೇ ಊರಿನ ಮನೆಮನೆಗೂ ಪುರಸಭೆಯಿಂದ ಶುಕ್ರವಾರ ಕಸದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು. ಒಣಕಸ ಮತ್ತು ಹಸಿಕಸ ಬೇರ್ಪಡಿಸಿದರೆ ಪರಿಸರ ಸ್ವಚ್ಛವಾಗಿಡಲು ಸಾಧ್ಯ. ಮನೆ ಸುತ್ತಲಿನ ವಾತಾವರಣ ಸ್ವಚ್ಛವಾಗಿ ಇರುತ್ತದೆ ಎಂದರು.
ಆರ್‌ಎಸ್‌ಎಸ್‌ಎನ್ ಉಪಾಧ್ಯಕ್ಷ ಎಚ್.ಎಂ.ಗಂಗಾಧರಯ್ಯ, ಪುರಸಭೆ ನಾಮ ನಿರ್ದೇಶಕ ಕೊಟ್ರೇಶ ತ್ಯಾವಣಿಗಿ, ಆರೋಗ್ಯಾಧಿಕಾರಿ ವಿಜಯಲಕ್ಷ್ಮೀ, ಸೊನ್ನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಕೃಷ್ಣನಾಯ್ಕ, ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ ಇತರರಿದ್ದರು.
TAGGED:ಕಸ ಬೇರ್ಪಡಿಸಿ