Check Post ಗಳಲ್ಲಿ 2 ಕಡೆ ಅಬಕಾರಿಯಿಂದ ಪೊಲೀಸ್‌ ಇಲಾಖೆ ದೂರ

Check Post

ಕಾರವಾರ: ಗೋವಾ ಗಡಿಯಲ್ಲಿರುವ ಅಬಕಾರಿ ಇಲಾಖೆಯ ನೇತೃತ್ವದ ಜಿಲ್ಲೆಯ ಎರಡು  ಸಂಯುಕ್ತ ತನಿಖಾ ಠಾಣೆಗಳಿಂದ (Check Post )ಪೊಲೀಸ್ ಇಲಾಖೆ ಈಗಾಗಲೇ ಬೇರ್ಪಟ್ಟಿದೆ.

ರಾಜ್ಯದಲ್ಲಿ ಅಬಕಾರಿ ಕಿಕ್ ಬ್ಯಾಕ್ ಗಲಾಟೆ ಎದ್ದಿದೆ. ಕಾಕತಾಳೀಯ ಎಂಬಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬಕಾರಿ, ಪೊಲೀಸ್ ನಡುವೆ ವೈಮನಸ್ಸು ಮೂಡಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ತಾಲೂಕಿನ ಮಾಜಾಳಿಯಲ್ಲಿಯಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ 4ಎ ದಲ್ಲಿ ಅನಮೋಡದಲ್ಲಿ ಅಬಕಾರಿ ಸಂಯುಕ್ತ ತನಿಖಾ ಠಾಣೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಬೇರೆಡೆ ಶೀಘ್ರ ಪ್ರತ್ಯೇಕ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.
ಏಕೆ ವಿವಾದ..?
ಕೆಲ ದಿನಗಳ ಹಿಂದೆ ಮಾಜಾಳಿಯ ತನಿಖಾ ಠಾಣೆಯಲ್ಲಿ ಅಕ್ರಮ ಮದ್ಯ ತಪಾಸಣೆಯ ನೆಪದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದವಿಡಿಯೋ ವೈರಲ್ ಆಗಿತ್ತು. ಅಬಕಾರಿ ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ ಹಾಗೂ ಸಿಬ್ಬಂದಿ ಹೇಮಚಂದ್ರ ವಿರುದ್ಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯ ಲಾರಿ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈ ಘಟನೆಯ ನಂತರ ಮಾಜಾಳಿಯಲ್ಲಿ ಅಬಕಾರಿ,ಪೊಲೀಸರ ನಡುವೆ ವೈಮನಸ್ಯ ಮೂಡಿದೆ.

Check Post ಎಂಬ ಚಿನ್ನದ ಮೊಟ್ಟೆಯ ಕೋಳಿ

ದೇಶದ ಇತರ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಮದ್ಯದ ಮೇಲಿನ ಸುಂಕ ಅತಿ ಕಡಿಮೆ ಇದೆ. ಇದರಿಂದ ಗೋವಾದಿಂದ ರಸ್ತೆ, ರೈಲು ಹಾಗೂ ಜಲ ಮಾರ್ಗವಾಗಿ ದೊಡ್ಡ ಪ್ರಮಾಣದಲ್ಲಿ ಮದ್ಯ ಕರ್ನಾಟಕ ಸೇರಿ ಬೇರೆ ರಾಜ್ಯಗಳಿಗೆ ಸಾಗಣೆಯಾಗುತ್ತವೆ. ಪರಿಣಾಮ ಕರ್ನಾಟಕದ ಮದ್ಯದ ಆದಾಯದ ಮೇಲೆ ಭಾರಿ ಹೊಡೆತ ಬೀಳುತ್ತಿರುವ ಆರೋಪವಿದೆ. ಇದರ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಸಭೆ ನಡೆಸಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಸೂಚನೆಯನ್ನು ಅಬಕಾರಿ ಅಧಿಕಾರಿಗಳ ಮೇಲೆ ನೀಡಿದ್ದರು. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ 4ಎ ದಲ್ಲಿರುವ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಗಳಲ್ಲಿ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ, ಬಸ್‌ಗಳು, ದುಬಾರಿ ಕಾರುಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಚೆಕ್‌ಪೋಸ್ಟ್ನಲ್ಲಿ ಅಕ್ರಮ ಮದ್ಯ ತಡೆಯುವ ನೆಪದಲ್ಲಿ ಕ್ಯಾಮರಾ ಕಣ್ಣು ತಪ್ಪಿಸಿ, ಭಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ಹಿಂದೆ ಬೆಂಗಳೂರಿನ ವಕೀಲ ಜಗದೀಶ್ ಈ ಠಾಣೆಯ ವಿರುದ್ಧ ಮಾಡಿದ ಆರೋಪದ ವಿಡಿಯೋ ವೈರಲ್ ಆಗಿತ್ತು. ಈ ತನಿಖಾ ಠಾಣೆಗಳು ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬ ಸುದ್ದಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ವಲಯದಲ್ಲಿದ್ದು, ಇಲ್ಲಿಗೆ ಕರ್ತವ್ಯ ನೇಮಕ ಮಾಡಿಸಿಕೊಳ್ಳಲು ಎರಡೂ ಇಲಾಖೆಯಲ್ಲಿ ಭಾರಿ ಪೈಪೋಟಿ ನಡೆಯುವ ಮಾಹಿತಿ ಇದೆ.

ನಮಗೆ ತಿಳಿದಿಲ್ಲ:

10 ದಿನಗಳಿಂದ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸದೇ ಇರುವುದು ಸತ್ಯ. ಆದರೆ, ಅವರೇ ಬೇರೆ ಚೆಕ್ ಪೋಸ್ಟ್ ಮಾಡುತ್ತಾರೆ ಎಂಬ ವಿಚಾರ ಗಮನಕ್ಕೆ ಬಂದಿಲ್ಲ ಎಂದು ಅಬಕಾರಿ ಉಪ ಆಯುಕ್ತ ಜಗದೀಶ ಕುಲಕರ್ಣಿ ಹೇಳಿದ್ದಾರೆ.
ಸಂಯುಕ್ತ ತನಿಖಾ ಠಾಣೆ (Check Post) ಇದಾಗಿದ್ದು, ಅಬಕಾರಿ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಅಧಿಕಾರಿ, ಸಿಬ್ಬಂದಿ ಜತೆಗೆ ಅರಣ್ಯ, ಪೊಲೀಸ್ ಅಽಕಾರಿಗಳೂ ಹಿಂದಿನಿಂದ ಇಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಚೆಕ್ ಪೋಸ್ಟ್ಗಳ ಸಿಸಿ ಕ್ಯಾಮರಾಗಳ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕೂಡ ಇದೆ. ಪೊಲೀಸ್ ಅಽಕಾರಿಗಳು ತನಿಖೆಗಾಗಿ ಅವುಗಳನ್ನು ಕೇಳಿದಾಗ ನಾವು ಅದನ್ನು ಅವರಿಗೆ ಒದಗಿಸಿದ್ದೇವೆ. ಈ ವಿಷಯದ ಕುರಿತು ಎಸ್‌ಪಿ ಅವರೊಂದಿಗೆ ಚರ್ಚಿಸಿ ನಿರ್ಣಯಿಸುವುದಾಗಿ ಅವರು ತಿಳಿಸಿದ್ದಾರೆ. ಮಾಜಾಳಿ ತನಿಖಾ ಠಾಣೆಯಲ್ಲಿ (Check Post)ಒಬ್ಬ ಇನ್ಸ್ಪೆಕ್ಟರ್, ಒಬ್ಬ ಸಬ್ ಇನ್ಸ್ಪೆಕ್ಟರ್ ಹಾಗೂ 11 ಸಿಬ್ಬಂದಿ ಮಂಜೂರಾಗಿದೆ. ಆದರೆ, ಒಬ್ಬ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ಸ್ಪೆಕ್ಟರ್ ಹಾಗೂ ಒಬ್ಬ ಸಿಬ್ಬಂದಿಯನ್ನು ಇತ್ತೀಚೆಗೆ ಬೇರೆಗೆ ನಿಯೋಜನೆ ಮಾಡಲಾಗಿದೆ. ಹಾಗಾಗಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸಿಬ್ಬಂದಿಯನ್ನು ವಾರದಲ್ಲಿ 3 ದಿನ ಇಲ್ಲಿ ನಿಯೋಜನೆ ಮಾಡಲಾಗುತ್ತಿದೆ. 8 ತಾಸಿನಂತೆ 4 ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, ಒಂದು ಪಾಳಿಯಲ್ಲಿ ನಾಲ್ವರು ಇರಲಿದ್ದಾರೆ. ತನಿಖಾ ಠಾಣೆಯಲ್ಲಿ ಅಕ್ರಮ ತಡೆಯುವ ಬಗ್ಗೆ ನಿರಂತರ ಕ್ರಮ ವಹಿಸಲಾಗುತ್ತಿದೆ ಎಂದು ಜಗದೀಶ ಕುಲಕರ್ಣಿ ಅವರು ಹೇಳಿದ್ದಾರೆ.

ಮಾಜಾಳಿ ಹಾಗೂ ಅನಮೋಡದಲ್ಲಿ ಎಕ್ಸ್ಸೈಸ್‌ನವರ ಜತೆ ಪೊಲೀಸ್ ಸಿಬ್ಬಂದಿಯೂ ಇರುತ್ತಿದ್ದರು. ಆದರೆ, ಅದರಿಂದ ಪೊಲೀಸ್ ಸಿಬ್ಬಂದಿ ಮೇಲೆಯೂ ಅಲಿಗೇಶನ್‌ಗಳು ಬರುತ್ತಿದ್ದವು. ಇದರಿಂದ ಸಂಯುಕ್ತ ತನಿಖಾ ಠಾಣೆಯಲ್ಲಿ ಸಿಬ್ಬಂದಿ ನೇಮಿಸುತ್ತಿಲ್ಲ. ಬೇರೆಡೆ ಠಾಣೆ ನಿರ್ಮಿಸಿ ಸಿಸಿ ಕ್ಯಾಮರಾ ಅಳವಡಿಸಲಿದ್ದೇವೆ.
ಎಂ.ನಾರಾಯಣ ಎಸ್‌ಪಿ

https://www.facebook.com/share/p/19MsfYLQic/

ಉತ್ತರ ಕನ್ನಡhttps://www.vijayavani.net/ankola-airport-compensetion

https://www.vijayavani.net/ankola-airport-compensetion

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…